ವೈಭವ್‌ಗೆ ಇಂಡಿಯನ್ ಐಡಲ್ ಪ್ರಶಸ್ತಿ
ಮುಂಬೈ ,ಮಾ.೪-ವೈಭವ್ ಗುಪ್ತಾ ಅವರು ಜನಪ್ರಿಯ ರಿಯಾಲಿಟಿ ಶೋ ಇಂಡಿಯನ್ ಐಡಲ್‌ನ ೧೪ ನೇ ಸೀಸನ್‌ನ ವಿಜೇತರಾಗಿದ್ದಾರೆ.
ಇದರೊಂದಿಗೆ ೨೫ ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. ಮೊದಲ ರನ್ನರ್ ಅಪ್ ಶುಭದೀಪ್ ದಾಸ್ ಚೌಧರಿ, ಎರಡನೇ ರನ್ನರ್ ಅಪ್ ಪಿಯೂಷ್ ಪನ್ವಾರ್ ೫ ಲಕ್ಷ ರೂ ಮತ್ತು ಮೂರನೇ ರನ್ನರ್ ಅಪ್ ಅನನ್ಯಾ ಪಾಲ್ ೩ ಲಕ್ಷ ರೂಪಾಯಿ ಬಹುಮಾನ ಮತ್ತು ಕಾರು ಪಡೆದಿದ್ದಾರೆ.
ಭಾನುವಾರ ಮಾರ್ಚ್ ೩ ರಂದು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಅವರು ಇತರ ಐದು ಫೈನಲಿಸ್ಟ್‌ಗಳನ್ನು ಸೋಲಿಸಿ ಟ್ರೋಫಿಯನ್ನು ಪಡೆದಿದ್ದಾರೆ.
ಇಂಡಿಯನ್ ಐಡಲ್. ಇದು ದೇಶದ ಅತ್ಯುತ್ತಮ ಗಾಯನ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಇತ್ತೀಚಿನ ಹಿಂದಿ ಆವೃತ್ತಿಯು ತನ್ನ ೧೪ ನೇ ಸೀಸನ್ ಪೂರ್ಣಗೊಳಿಸಿದೆ. ಕಾನ್ಪುರದ ವೈಭವ್ ಗುಪ್ತಾ ಈ ಋತುವಿನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ೧೫ ಮಂದಿಯೊಂದಿಗೆ ಆರಂಭವಾದ ಈ ಸೀಸನ್ ನಲ್ಲಿ ಆರು ಮಂದಿ ಫೈನಲಿಸ್ಟ್ ಆಗಿದ್ದರು. ಭಾನುವಾರ (ಮಾರ್ಚ್ ೩) ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಉಳಿದ ಐವರನ್ನು ಸೋಲಿಸಿ ವೈಭವ್ ಗೆದ್ದರು.
ಇಂಡಿಯನ್ ಐಡಲ್‌ನ ೧೪ನೇ ಸೀಸನ್‌ನಲ್ಲಿ ವೈಭವ್ ಗುಪ್ತಾ, ಸುಭದೀಪ್ ದಾಸ್, ಪಿಯೂಷ್ ಪವಾರ್, ಅನನ್ಯ ಪೌಲ್, ಅಂಜನಾ ಪದ್ಮನಾಭನ್ ಮತ್ತು ಆದ್ಯಾ ಮಿಶ್ರಾ ಅವರೊಂದಿಗೆ ಫೈನಲ್ ತಲುಪಿದ್ದಾರೆ. ಇವರಿಬ್ಬರ ನಡುವಿನ ಫೈನಲ್ ಕೂಡ ಬಿರುಸಿನಿಂದ ಕೂಡಿತ್ತು. ಆದರೆ ಅಂತಿಮವಾಗಿ ದೇಶಾದ್ಯಂತ ತೀರ್ಪುಗಾರರು ಮತ್ತು ಪ್ರೇಕ್ಷಕರು ನೀಡಿದ ಮತಗಳ ಆಧಾರದ ಮೇಲೆ ವೈಭವ್ ಗುಪ್ತಾ ಅವರನ್ನು ವಿಜೇತ ಎಂದು ಘೋಷಿಸಲಾಯಿತು.
ಖ್ಯಾತ ಗಾಯಕ ಕುಮಾರ್ ಸಾನು, ಶ್ರೇಯಾ ಘೋಷಾಲ್ ಮತ್ತು ಸಂಗೀತ ನಿರ್ದೇಶಕ ವಿಶಾಲ್ ದಾದ್ಲಾನಿ ಈ ೧೪ ನೇ ಸೀಸನ್‌ಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೯೦ ರ ದಶಕದಲ್ಲಿ ಭಾರತೀಯ ಸಂಗೀತಕ್ಕೆ ಉತ್ತೇಜನ ನೀಡಿದ ಕುಮಾರ್ ಸಾನು ಅವರು ಮೊದಲ ಬಾರಿಗೆ ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಹುಸೇನ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ ಮಾತನಾಡಿದ ವೈಭವ್ ಈ ಕಾರ್ಯಕ್ರಮದಿಂದ ನಾನು ಗೆದ್ದ ಬಹುಮಾನದ ಹಣದಿಂದ ನನ್ನ ಸ್ವಂತ ಸ್ಟುಡಿಯೊವನ್ನು ಸ್ಥಾಪಿಸಲು ಬಯಸುತ್ತೇನೆ. ಅಲ್ಲಿ ನಾನು ಹಾಡುವ ಹಾಡುಗಳನ್ನು ನಾನು ರೆಕಾರ್ಡ್ ಮಾಡುತ್ತೇನೆ. ನನ್ನ ಅಭಿಮಾನಿಗಳು ಮತ್ತು ಪ್ರೇಕ್ಷಕರು ಯಾವಾಗಲೂ ನನ್ನೊಂದಿಗೆ ನಿಂತಿದ್ದಾರೆ. ನಾನು ಅವರಿಗೆ ಹೆಚ್ಚು ಮನರಂಜನೆ ನೀಡುತ್ತೇನೆ ಸ್ಟುಡಿಯೋ ಹೊಂದುವುದು ನನ್ನ ಕನಸಾಗಿತ್ತು ಎಂದು ತಮ್ಮ ಕನಸು ಹಂಚಿಕೊಂಡಿದ್ದಾರೆ.