ಮುಂಬೈನಲ್ಲಿ ೧೫ ಕೆಜಿ ಚಿನ್ನವಶ
ಮುಂಬೈ,ಮಾ.೨-ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆ ಅತಿ ಮುಖ್ಯ ಕಾರ್ಯಾಚರಣೆಯಲ್ಲಿ ಕಳೆದ ಮೂರು ದಿನಗಳಲ್ಲಿ ಹದಿಮೂರು ವಿವಿಧ ಪ್ರಕರಣಗಳಲ್ಲಿ ಸುಮಾರು ೮.೦೭ ಕೋಟಿ ಮೌಲ್ಯದ ೧೫.೮೯ ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ವಿಮಾನ ನಿಲ್ದಾಣ ಕಮಿಷನರೇಟ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಒಟ್ಟು ೮.೦೭ಕೋಟಿ ಮೌಲ್ಯದ ಚಿನ್ನ ಮತ್ತು ದುಬಾರಿ ಫೋನ್ ವಶಪಡಿಸಿಕೊಂಡಿದೆ. ಫೆಬ್ರವರಿ ೨೩ ಮತ್ತು ೨೫ ರ ನಡುವೆ ಮುಂಬೈ ಕಸ್ಟಮ್ಸ್ನ ಏರ್ ಪೋರ್ಟ್ ಕಮಿಷನರೇಟ್ ೭.೫೭ ಕೆ.ಜಿಗೂ ಹೆಚ್ಚು ಚಿನ್ನ ಮತ್ತು ಐಫೋನ್ ವಶಪಡಿಸಿಕೊಂಡಿದೆ. ಚಿನ್ನವನ್ನು ಬಟ್ಟೆ ಮತ್ತು ಕೈಚೀಲಗಳಲ್ಲಿ ಜಾಣ್ಮೆಯಿಂದ ಬಚ್ಚಿಟ್ಟಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮೊದಲು, ಫೆಬ್ರವರಿ ೧೮ ಮತ್ತು ೨೪ ರ ನಡುವಿನ ಪ್ರತ್ಯೇಕ ಪ್ರಕರಣದಲ್ಲಿ, ಕಸ್ಟಮ್ಸ್ ಅಧಿಕಾರಿಗಳು ಏಳು ಪ್ರತ್ಯೇಕ ಕಳ್ಳಸಾಗಣೆ ಪ್ರಕರಣಗಳನ್ನು ಭೇದಿಸಿದ್ದಾರೆ ತೀವ್ರ ತನಿಖೆ ವೇಳೆ ಆರೋಪಿಯಿಂದ ೪.೦೯ ಕೋಟಿ ಮೌಲ್ಯದ ೭.೬೪ ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಅಕ್ರಮ ಚಟುವಟಿಕೆ ನಡೆಸಲು ಕಳ್ಳಸಾಗಣೆದಾರರು ಮೊಬೈಲ್ ಕಂಪನಿಯ ಚಿಲ್ಲರೆ ಉದ್ಯೋಗಿಗಳ ಸಹಾಯವನ್ನೂ ಪಡೆದಿದ್ದಾರೆ. ಆರೋಪಿಗಳು ಕಳ್ಳಸಾಗಣೆ ಮಾಡಿದ ಚಿನ್ನವನ್ನು ಹಾಟ್ ಪ್ಯಾನ್, ಸೈಕಲ್, ಏರ್ ಕ್ರಾಫ್ಟ್ ಸೀಟ್, ಬ್ಯಾಗ್ ನ ಮೂಲೆಯ ಪೈಪ್ ಗಳಲ್ಲಿ ಹಾಗೂ ಚೆಕ್ ಇನ್ ಬ್ಯಾಗ್ ನಲ್ಲಿ ಬಚ್ಚಿಟ್ಟಿದ್ದರು. ಚಿನ್ನ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆಯಲು ಪ್ರಕರಣದ ತನಿಖೆ ಮುಂದುವರಿದಿದೆ.