ಪಾಪ್ ತಾರೆ ಜೊತೆ ಹೆಜ್ಜೆ ಹಾಕಿದ ಅಂಬಾನಿ ಕುಟುಂಬ
ಜಾಮನಗರ,ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಜುಲೈನಲ್ಲಿ ವಿವಾಹವಾಗಲಿದ್ದು, ಅವರ ವಿವಾಹ ಪೂರ್ವ ಸಮಾರಂಭಗಳು ನಡೆಯುತ್ತಿವೆ. ತಮ್ಮ ಮಗನ ಜೀವನದ ಈ ಕ್ಷಣಗಳನ್ನು ವಿಶೇಷವಾಗಿಸಲು, ಮುಖೇಶ್ ಅಂಬಾನಿ ಭಾರತ ಮತ್ತು ವಿದೇಶದ ಪ್ರಸಿದ್ಧ ವ್ಯಕ್ತಿಗಳನ್ನು ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.ಇದರಲ್ಲಿ
ಹಾಲಿವುಡ್ ಪಾಪ್ ತಾರೆ ರಿಹಾನ್ನಾ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಪ್ರದರ್ಶನ ನೀಡಲು ಭಾರತಕ್ಕೆ ಬಂದಿದ್ದಾರೆ.ಮಾರ್ಚ್ ೧ರಂದು ಅಂದರೆ ನಿನ್ನೆ ಜಾಮ್‌ನಗರದಲ್ಲಿ ನಡೆದ ಮೊದಲ ಸಮಾರಂಭದಲ್ಲಿ ರಿಹಾನ್ನಾ ಸದ್ದು ಮಾಡಿದ್ದಾರೆ. ಭರ್ಜರಿ ಪ್ರದರ್ಶನ ನೀಡಿದ್ದಾರೆ.ಅವರು ತಮ್ಮ ಅಭಿನಯ-ಹಾಡಿನಿಂದ ಹಾವಭಾವಗಳಿಂದ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡಿದ್ದಾರ.ಇದಾದ ನಂತರ ಎಲ್ಲರನ್ನೂ ತುಂಬಾ ಪ್ರೀತಿಯಿಂದ ಭೇಟಿಯಾದರು. ಅಷ್ಟೇ ಅಲ್ಲ, ತಾನು ಭಾರತವನ್ನು ಪ್ರೀತಿಸುತ್ತಿದ್ದೇನೆ ಎಂದು ರಿಹಾನ್ನಾ ಹೇಳಿದ್ದಾರೆ.ಅಂಬಾನಿ ಕುಟುಂಬಕ್ಕೆ ರಿಹಾನ್ನಾ ತುಂಬಾ ಸುಂದರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ರಿಹಾನ್ನಾ ಅವರ ಅನೇಕ ವೀಡಿಯೊಗಳು ಕಾಣಿಸಿಕೊಂಡಿವೆ, ಅದರಲ್ಲಿ ಅವರು ಭಾರತದಲ್ಲಿನ ಅನುಭವ ಮತ್ತು ಅಂಬಾನಿ ಅವರ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರದರ್ಶನವು ಅತ್ಯುತ್ತಮವಾಗಿದೆ ಎಂದು ರಿಹಾನ್ನಾ ತನ್ನ ಕಾರ್ಯಕ್ರಮದ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದರು. ‘ಐ ಲವ್ ಇಂಡಿಯಾ’ ಎಂದ ಅವರು, ಪಾಪರಾಜಿಗಳಿಗೆ ಸಾಕಷ್ಟು ಪೋಸ್ ಕೊಟ್ಟಿದ್ದಾರೆ
ರಿಹಾನ್ನಾ ಅವರು ’ಪೋರ್ ಇಟ್ ಅಪ್’, ’ವೈಲ್ಡ್ ಥಿಂಗ್ಸ್’ ಮತ್ತು ’ಡೈಮಂಡ್ಸ್’ ನಂತಹ ಅನೇಕ ಸೂಪರ್‌ಹಿಟ್ ಹಾಡುಗಳನ್ನು ಹಾಡಿದರು. ರಿಹಾನ್ನಾ ನಿಯಾನ್ ಹಸಿರು ಬಣ್ಣದ ಉಡುಪನ್ನು ಧರಿಸಿದ್ದರು.
ಎಲ್ಲರಿಗೂ ಶುಭಾಶಯ ಕೋರುವ ಮೂಲಕ ರಿಹಾನ್ನಾ ತನ್ನ ಪ್ರದರ್ಶನವನ್ನು ಪ್ರಾರಂಭಿಸಿದಳು ಮತ್ತು ಈ ಅನುಭವವು ತನಗೆ ತುಂಬಾ ವಿಶೇಷವಾಗಿದೆ, ಏಕೆಂದರೆ ತಾನು ಹಿಂದೆಂದೂ ಭಾರತಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ. ಅಂಬಾನಿ ಕುಟುಂಬದಿಂದಾಗಿ ತಾನು ಭಾರತಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಅನಂತ್ ಮತ್ತು ರಾಧಿಕಾ ಅವರನ್ನು ಅಭಿನಂದಿಸಿ ಇಲ್ಲಿಗೆ ಆಹ್ವಾನಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.
ರಿಹಾನ್ನಾ ಅವರು ಇಡೀ ಅಂಬಾನಿ ಕುಟುಂಬದೊಂದಿಗೆ ಡ್ಯಾನ್ಸ್ ಮಾಡಿದ್ದಾರೆ, ಅದರ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಕಾಕ್‌ಟೇಲ್ ಪಾರ್ಟಿಯಲ್ಲಿ ನೀತಾ ಅಂಬಾನಿ ಮತ್ತು ರಾಧಿಕಾ ಜೊತೆ ಭರ್ಜರಿ ಡ್ಯಾನ್ಸ್ ಕೂಡ ಮಾಡಿದ್ದಾರೆ.