ಬಹುಮಹಡಿ ಕಟ್ಟಡದಲ್ಲಿ ಬೆಂಕಿ: ೪೩ ಮಂದಿ ಸಾವು
ಢಾಕಾ,ಮಾ.೧- ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿನ ಬಹುಮಹಡಿ ಕಟ್ಟಡವೊಂದರಲ್ಲಿ ಆಕಸ್ಮಿಕ ಬೆಂಕಿಯ ಸ್ಫೋಟದಲ್ಲಿ ಕನಿಷ್ಠ ೪೩ ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ೭೫ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಡರಾತ್ರಿ ನಡೆದಿದೆ.
ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ೩೩ ಜನರು ಸಾವನ್ನಪ್ಪಿದ್ದಾರೆ ಸುಟ್ಟಗಾಯಗಳ ಆಸ್ಪತ್ರೆಯಲ್ಲಿ ಕನಿಷ್ಠ ೧೦ ಮಂದಿ ಸಾವನ್ನಪ್ಪಿದ್ದಾರೆ. ಇಪ್ಪತ್ತೆರಡು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಬಾಂಗ್ಲಾದೇಶದ ಆರೋಗ್ಯ ಸಚಿವ ಸಮಂತಾ ಲಾಲ್ ಸೇನ್ ಹೇಳಿದ್ದಾರೆ.
ವಾಣಿಜ್ಯ ಮತ್ತು ವಸತಿ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡು ಈ ಘಟನೆ ನಡೆದಿದೆ. ಬಾಂಗ್ಲಾದೇಶದಲ್ಲಿ ಸಾಮಾನ್ಯವಾಗಿ ಕಳಪೆ ಸುರಕ್ಷತಾ ಕ್ರಮದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ರಾಜಧಾನಿ ಢಾಕಾದಲ್ಲಿ ಮುಂಜಾನತೆ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಎಪ್ಪತ್ತೈದು ಜನರನ್ನು ರಕ್ಷಿಸಲಾಗಿದೆ ಮತ್ತು ಹತ್ತಾರು ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅದರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ
ತನಿಖೆಗೆ ಸೂಚನೆ:
ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ ಎರಡು ಗಂಟೆಗಳ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸೂಚಿಸಲಾಗಿದೆ.
ಏಳು ಮಹಡಿ ಹೊಂದಿರುವ ಕಟ್ಟಡದಲ್ಲಿರುವ ಕಚ್ಚಿ ಭಾಯಿ ರೆಸ್ಟೋರೆಂಟ್‌ಗೆ ಅಗ್ನಿಶಾಮಕ ದಳ ಆಗಮಿಸುವ ವೇಳೆಗೆ ಅವಘಡ ಸಂಭವಿಸಿತ್ತು ಎನ್ನಲಾಗಿದೆ. ಕಟ್ಟಡದಲ್ಲಿರುವ ಸಂಕೀರ್ಣ ಇತರ ರೆಸ್ಟೋರೆಂಟ್‌ಗಳು ಮತ್ತು ಹಲವಾರು ಬಟ್ಟೆ ಮತ್ತು ಮೊಬೈಲ್ ಫೋನ್ ಅಂಗಡಿಗಳನ್ನು ಸಹ ಒಳಗೊಂಡಿದೆ.
ಅನಿಲ ಸೋರಿಕೆ ಅಥವಾ ಸ್ಟೌವ್‌ನಿಂದ ಬೆಂಕಿ ಹುಟ್ಟಿಕೊಂಡಿರಬಹುದು ಎಂದು ಬಾಂಗ್ಲಾದೇಶ ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಮೈನ್ ಉದ್ದೀನ್ ಹೇಳಿದ್ದಾರೆ.
“ಇದು ಪ್ರತಿ ಮಹಡಿಯಲ್ಲಿ ಗ್ಯಾಸ್ ಸಿಲಿಂಡರ್‍ಗಳನ್ನು ಹೊಂದಿರುವ ಅಪಾಯಕಾರಿ ಕಟ್ಟಡವಾಗಿತ್ತು, ಮೆಟ್ಟಿಲುಗಳ ಮೇಲೂ ಸಹ” ಎಂದು ತಿಳಿಸಿದ್ದಾರೆ. ಒಡೆದ ಕಿಟಕಿಯ ಮೂಲಕ ಬೆಂಕಿಯಿಂದ ಸ್ವಲ್ಪ ದೂರದಲ್ಲಿ ಪಾರಾಗಿದ್ದಗಾಗಿ ಬದುಕುಳಿದ ಮೊಹಮ್ಮದ್ ಅಲ್ತಾಫ್ ತಿಳಿಸಿದ್ದಾರೆ.