ತಾಯಿಯಾಗಲಿರುವ ನಟಿ ದೀಪಿಕಾ
ಮುಂಬೈ,ಫೆ.೨೯-ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ದೀಪಿಕಾ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ತಮ್ಮ ಗರ್ಭಧಾರಣೆಯನ್ನು ಖಚಿತಪಡಿಸಿದ್ದಾರೆ.
ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಶುಭ ಸುದ್ದಿ ಹಂಚಿಕೊಂಡಿದ್ದಾರೆ.
ದೀಪಿಕಾ ಗರ್ಭಿಣಿ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.ಜೊತೆಗೆ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ದೀಪಿಕಾ ಪಡುಕೋಣೆ-ರಣ್‌ವೀರ್ ಸಿಂಗ್ ಮನೆಯಲ್ಲಿ ಪುಟ್ಟ ಕಂದನ ಮಂದಹಾಸ ಮೂಡಿ ಬರಲಿದೆ.ನಟಿ ದೀಪಿಕಾ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ.
ದಂಪತಿಗಳು ಮಕ್ಕಳನ್ನು ಹೊಂದುವ ಬಯಕೆಯನ್ನು ಹಲವಾರು ಬಾರಿ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹಲವಾರು ಬಾರಿ ಗರ್ಭಧಾರಣೆಯ ವದಂತಿಗಳನ್ನು ಹುಟ್ಟುಹಾಕಿದ್ದರು.ಆದರೆ ಇದೀಗ
ಕೊನೆಗೂ ದೀಪಿಕಾ ಗರ್ಭಿಣಿ ಎಂಬುದು ದೃಢಪಟ್ಟಿದೆ. ಅಂದರೆ ರಣವೀರ್ ಸಿಂಗ್ ಮತ್ತು ದೀಪಿಕಾ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ಮದುವೆಯಾದ ಆರು ವರ್ಷಗಳ ನಂತರ ತಮ್ಮ ಮೊದಲ ಮಗುವನ್ನು ಒಟ್ಟಿಗೆ ಸ್ವಾಗತಿಸಲು ಸಜ್ಜಾಗಿದ್ದಾರೆ.
ದೀಪಿಕಾ ಮತ್ತು ರಣವೀರ್ ನವೆಂಬರ್ ೧೪, ೨೦೧೮ ರಂದು ಇಟಲಿಯ ಲೇಕ್ ಕೊಮೊ ಬಳಿ ಭವ್ಯ ಸಮಾರಂಭದಲ್ಲಿ ವಿವಾಹವಾದರು. ೨೦೧೩ರಲ್ಲಿ ತೆರೆಕಂಡ ಗೋಲಿಯೋನ್ ಕಿ ರಾಸ್ಲೀಲಾ- ರಾಮ್ ಲೀಲಾ ಚಿತ್ರದ ಚಿತ್ರೀಕರಣದ ವೇಳೆ ಅವರು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು.