ದಡಕ್ಕೆ ಬಂದ ಭಾರೀ ಗಾತ್ರದ ತಿಮಿಂಗಿಲ
ಶ್ರೀಕಾಕುಳಂ,ಫೆ.೨೮- ಡೊಂಕೂರು ಕಡಲತೀರದಲ್ಲಿ ಅಪರೂಪದ ಭಾರೀ ಗಾತ್ರದ ತಿಮಿಂಗಿಲ ದಡ ಸೇರಿದೆ. ಸುಮಾರು ಎರಡು ಟನ್ ತೂಕದ ಟೈಗರ್ ಶಾರ್ಕ್ ದಡಕ್ಕೆ ಕೊಚ್ಚಿಕೊಂಡು ಬಂದಿದೆ.
ತಿಮಿಂಗಿಲ ಶಾರ್ಕ್ ಉದ್ದ ೧೫ ಅಡಿ, ಅಗಲ ೬ ಅಡಿ ಮತ್ತು ತೂಕ ಸುಮಾರು ೨ ಟನ್ ಇದೆ ಎಂದು ಮೀನುಗಾರರು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ, ಈ ಬೃಹತ್ ಶಾರ್ಕ್ ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಈ ದೃಶ್ಯವನ್ನು ನೋಡಿದವರಿಗೆ ಆಶ್ಚರ್ಯವಾಗಿದೆ. ಸಮುದ್ರ ತೀರದಲ್ಲಿ ಸತ್ತ ತಿಮಿಂಗಿಲ ಶಾರ್ಕ್‌ನ ವಿಡಿಯೋ ವೈರಲ್ ಆಗುತ್ತಿದೆ, ಇದರಲ್ಲಿ ಮಕ್ಕಳು ಶಾರ್ಕ್ ತಿಮಿಂಗಿಲದ ಮೇಲೆ ಆಟವಾಡುತ್ತಿರುವುದನ್ನು ಕಾಣಬಹುದು. ಈ ಬೃಹತ್ ಶಾರ್ಕ್ ತಿಮಿಂಗಿಲವನ್ನು ನೋಡಲು ದೂರದ ಊರುಗಳಿಂದ ಜನ ಬರುತ್ತಿದ್ದಾರೆ. ಸ್ಥಳೀಯ ಮೀನುಗಾರರ ಪ್ರಕಾರ, ಬೆಳಗ್ಗೆ ಬೇಟೆಗೆ ತೆರಳಿದ್ದ ಮೀನುಗಾರ ಪಿ.ಶೇಖರ್ ಬೋಟ್ ನಲ್ಲಿ ಸಿಲುಕಿದ್ದು, ಮತ್ತೊಂದು ಬೋಟ್ ಸಹಾಯದಿಂದ ಹೊರಕ್ಕೆ ತರಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.