ಇಂಫಾಲ: ಅಪಹೃತ ಅಧಿಕಾರಿ ರಕ್ಷಣೆ
ಇಂಫಾಲ್ ,ಫೆ.೨೮-ಮಣಿಪುರದಲ್ಲಿ ಅಪಹರಣಕ್ಕೊಳಗಾಗಿದ್ದ ಹೆಚ್ಚುವರಿ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ಮೈಂಗ್ಬಾಮ್ ಅವರನ್ನು ಕ್ಷಿಪ್ರ ಕಾರ್ಯಾಚರಣೆಯ ನಂತರ ಪೊಲೀಸರು ಮತ್ತು ಭದ್ರತಾ ಪಡೆಗಳು ರಕ್ಷಿಸಿದ್ದಾರೆ. ಅವರನ್ನು ಮೈತೆಯ್ ಸಂಘಟನೆ ಅರಂಬೈ ತೆಂಗೋಲ್‌ನ ಕಾರ್ಯಕರ್ತರು ಅಪಹರಿಸಿದ್ದರು ಎನ್ನಲಾಗಿದೆ. ಇಂಫಾಲ್ ಪೂರ್ವದಲ್ಲಿ ನಡೆದಿದೆ.
ಹೆಚ್ಚುವರಿ ಪೊಲೀಸ್ ಅಧಿಕಾರಿ ಅಮಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಅಪಹರಣದ ನಂತರ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಇಂಫಾಲ್ ಪೂರ್ವದಲ್ಲಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ಇದೆ. ಇದೇ ವೇಳೆ ಪರಿಸ್ಥಿತಿ ನಿಯಂತ್ರಿಸಲು ಸೇನೆಯನ್ನು ಕರೆಸಲಾಗಿದೆ, ಅಸ್ಸಾಂ ರೈಫಲ್ಸ್ ನ ೪ ತುಕಡಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಎಎಸ್ಪಿ ಮೈತೇಯ್ ಸಂಘಟನೆಯ ೬ ಮಂದಿಯನ್ನು ಬಂಧಿಸಿದ್ದರು.ಇದರಿಂದ ಆಕ್ರೋಶಗೊಂಡ ಮೈತೇಯ್ ಸಂಘಟನೆಯ ಕೆಲವರು ಮಂಗಳವಾರ ಸಂಜೆ ಎಎಸ್ಪಿ ಅಮಿತ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಮತ್ತು ಶಸ್ತ್ರಸಜ್ಜಿತ ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ, ನಾಲ್ಕು ವಾಹನಗಳು ಜಖಂಗೊಂಡಿವೆ. ಇದಾದ ನಂತರ ಮೈತಿ ಜನರು ಅಮಿತ್‌ನನ್ನು ಅಪಹರಿಸಿದ್ದಾರೆ.
ಪೋಲೀಸ್ ಅಧಿಕಾರಿ ಅಮಿತ್ ಕೆಲವು ದಿನಗಳ ಹಿಂದೆ ವಾಹನ ಕಳ್ಳತನದ ಆರೋಪದ ಮೇಲೆ ಮೈತೇಯ್ ಸಂಘಟನೆ ಅರಂಬೈ ತೆಂಗೋಲ್‌ನ ೬ ಸದಸ್ಯರನ್ನು ಬಂಧಿಸಿದ್ದರು. ಇದಾದ ಬಳಿಕ ಸಂಘಟನೆ ಕೂಡ ತಮ್ಮ ಸದಸ್ಯರ ಬಿಡುಗಡೆಗೆ ಪ್ರತಿಭಟನೆ ನಡೆಸಿದೆ.
ಸಾರ್ವಜನಿಕರು ಭಯಭೀತರಾಗುವ ಅಗತ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ.
ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.