ಚಂದಕ್ಕಿಂತ ಚಂದ ಖ್ಯಾತಿಯ ಪಂಕಜ್ ಉಧಾಸ್ ನಿಧನ
ಮುಂಬೈ_ಫೆ.26-ಬಾಲಿವುಡ್ ಚಿತ್ರರಂಗ ದ ಗಾಯಕ,ಗಜಲ್ ಮಾಂತ್ರಿಕ ಪಂಕಜ್ ಉಧಾಸ್ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ನಿಧನದ ಸುದ್ದಿಯನ್ನು ಪುತ್ರಿ ನಯಾಬ್ ಉಧಾಸ್ ಖಚಿತಪಡಿಸಿದ್ದಾರೆ.
ಬಾಲಿವುಡ್ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಕನ್ನಡದಲ್ಲೂ ಅವರು ಹಾಡಿದ್ದಾರೆ. ಸುದೀಪ್ ನಟನೆಯ ಸ್ಪರ್ಶ ಸಿನಿಮಾದ ‘ಚೆಂದಕ್ಕಿಂತ ಚೆಂದ ನೀನೇ ಸುಂದರ’ ಗೀತೆಯು ಪಂಕಜ್ ಅವರ ಕಂಠದಲ್ಲೇ ಮೂಡಿ ಬಂದಿದ್ದು. ಇಟಗಿ ಈರಣ್ಣ ಅವರ ಸಾಹಿತ್ಯವನ್ನು ಈ ಹಾಡಿನ ಮೂಲಕ ನಾಡಿಗೆ ತಲುಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಗಾಯಕ ಪಂಕಜ್ ಉದಾಸ್ ಅವರ ನಿಧನಕ್ಕೆ ಬಾಲಿವುಡ್ ನಟರು, ಗಾಯಕರು, ಸಂಗೀತ ನಿರ್ದೇಶಕರು ಕಂಬನಿ ಮಿಡಿದಿದ್ದಾರೆ.