ಆರ್ಟಿಕಲ್ ೩೭೦ ಬಾಕ್ಸ್ ಆಫೀಸಿನಲ್ಲಿ ಉತ್ತಮ ಗಳಿಕೆ
ನವ ದೆಹಲಿ,ಫೆ.೨೬- ಯಾಮಿ ಗೌತಮ್ ಅವರ ‘ಆರ್ಟಿಕಲ್ ೩೭೦’ ಪ್ರತಿದಿನ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿದೆ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಆರಂಭವನ್ನು ಪಡೆದಿದೆ .ವಾರಾಂತ್ಯದಲ್ಲಿ ಗಳಿಕೆಯ ವಿಷಯದಲ್ಲಿ ಅದ್ಭುತ ಸಾಧನೆ ಮಾಡಿದೆ. ’ಆರ್ಟಿಕಲ್ ೩೭೦’ ಭಾನುವಾರದಂದು ಅತಿ ಹೆಚ್ಚು ಕಲೆಕ್ಷನ್ ಮಾಡಿದೆ.
ಈಗ ಅದರ ಗಳಿಕೆಯಲ್ಲಿ ಭಾರಿ ಜಿಗಿತ ಕಂಡುಬಂದಿದೆ.
ಮೂರೇ ದಿನಗಳಲ್ಲಿ ಚಿತ್ರ ೨೦ ಕೋಟಿ ಗಡಿ ದಾಟಿದೆ.
ಚಿತ್ರದಲ್ಲಿ ಯಾಮಿ ಜೊತೆಗೆ ಪ್ರಿಯಾಮಣಿ, ಅರುಣ್ ಗೋವಿಲ್ ಮತ್ತು ಕಿರಣ್ ಕರ್ಮಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥೆಯು ಕಾಶ್ಮೀರದಿಂದ ೩೭೦ ನೇ ವಿಧಿಯನ್ನು ತೆಗೆದುಹಾಕುವುದನ್ನು ಆಧರಿಸಿದೆ.
ಮೊದಲ ದಿನವೇ ಯಾಮಿ ಚಿತ್ರ ೫.೭ ಕೋಟಿ ಗಳಿಸಿದೆ. ಎರಡನೇ ದಿನ ಚಿತ್ರ ೭.೫ ಕೋಟಿ ಗಳಿಸಿದ್ದರೆ ಮೂರನೇ ದಿನ ೯.೫ ರಿಂದ ೧೦ ಗಳಿಕೆ ಕಂಡಿದೆ. ಮೂರನೇ ದಿನ ಚಿತ್ರದ ಗಳಿಕೆಯಲ್ಲಿ ಶೇ.೨೫ರಷ್ಟು ಏರಿಕೆಯಾಗಿದೆ.
ಉರಿ: ದಿ ಸರ್ಜಿಕಲ್ ಸ್ಟ್ರೈಕ್ ’ ಸಿನಿಮಾ ಮಾಡಿದ್ದ ನಿರ್ದೇಶಕ ಆದಿತ್ಯ ಜಂಬಳೆ ಈ ಬಾರಿ ’ ಆರ್ಟಿಕಲ್ ೩೭೦ ’ ಕಥೆಯನ್ನು ಪ್ರಸ್ತುತಪಡಿಸಿದ್ದಾರೆ . ಚಿತ್ರದಲ್ಲಿ ಯಾಮಿ ಗೌತಮ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಯಾಮಿ ಗೌತಮ್ ಅಭಿನಯದ ’ಆರ್ಟಿಕಲ್ ೩೭೦’ ಚಿತ್ರಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಬಗ್ಗೆ ಜನ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ . ಅಚ್ಚರಿಯ ಸಂಗತಿ ಎಂದರೆ ಚಿತ್ರದ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.