ಮುಂಬೈ ರೈಲಿನಲ್ಲಿ ನಿರ್ಮಲಾ ಪಯಣ
ಮುಂಬೈ,ಫೆ.೨೫- ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂಬೈನ ಜೀವನಾಡಿ ಎಂದು ಕರೆಯಲ್ಪಡುವ ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಮುಂಬೈನ ಘಾಟ್‌ಕೋಪರ್‌ನಿಂದ ಥಾಣೆಯ ಕಲ್ಯಾಣ್‌ಗೆ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಿದರು. ೩೦ ಕಿಲೋಮೀಟರ್ ಪ್ರಯಾಣದಲ್ಲಿ ಅವರು ಸಹ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದ್ದಾರೆ.
ಹಣಕಾಸು ಸಚಿವರು ಲೋಕಲ್ ರೈಲಿನಲ್ಲಿ ತಮ್ಮ ಪ್ರಯಾಣದ ಕೆಲವು ಚಿತ್ರಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ೩೦ ಕಿಲೋಮೀಟರ್ ಪ್ರಯಾಣದಲ್ಲಿ ಪ್ರಯಾಣಿಕರೊಂದಿಗೆ ಸಂಭಾಷಣೆ ನಡೆಸಿದ್ದೇನೆ ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಹಣಕಾಸು ಸಚಿವರನ್ನು ನೋಡಲು ಜನರು ಮುಗಿಬಿದ್ದಿದ್ದಾರೆ . ಸೀತಾರಾಮನ್ ಅವರೊಂದಿಗೆ ಹಲವರು ಸೆಲ್ಫಿ ತೆಗೆದುಕೊಂಡಿದ್ದಾರೆ.
ಮುಂಬೈನಲ್ಲಿ ಪ್ರತಿದಿನ ೬೫ ಲಕ್ಷಕ್ಕೂ ಹೆಚ್ಚು ಜನರು ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುತ್ತಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ನಗರದ ಐಕಾನಿಕ್ ಲೋಕಲ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ .ಇದು ಲಕ್ಷಾಂತರ ಮುಂಬೈಕರಿಗೆ ದೈನಂದಿನ ಸಾರಿಗೆ ವಿಧಾನವಾಗಿದೆ.
ಘಾಟ್‌ಕೋಪರ್‌ನಿಂದ ಕಲ್ಯಾಣ್ ನಿಲ್ದಾಣದವರೆಗೆ ಕೇಂದ್ರ ಸಚಿವರ ಪ್ರಯಾಣದ ಚಿತ್ರಗಳನ್ನು ನಿರ್ಮಲಾ ಸೀತಾರಾಮನ್ ಅವರ ಕಚೇರಿ ಹಂಚಿಕೊಂಡಿದೆ.
ಚಿತ್ರಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹ ಪ್ರಯಾಣಿಕರೊಂದಿಗೆ ಸಂವಾದ ನಡೆಸುತ್ತಿರುವುದನ್ನು ಕಾಣಬಹುದು. ಕೇಂದ್ರ ಸಚಿವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರಯಾಣಿಕರು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ ಕೆಲವರು ಅವರನ್ನು ಹೊಗಳಿದ್ದಾರೆ, ಆದರೆ ಇತರ ಬಳಕೆದಾರರು ಪ್ರಯಾಣದ ಸಮಯವನ್ನು ಪ್ರಶ್ನಿಸಿದ್ದಾರೆ, ಉಪನಗರ ರೈಲ್ವೆ ನೆಟ್‌ವರ್ಕ್‌ನೊಂದಿಗೆ ಜನದಟ್ಟಣೆ ಮತ್ತು ಮೂಲಸೌಕರ್ಯ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ.
ಇದಕ್ಕೂ ಮುನ್ನ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಸೈನ್ಸ್ (ಬಿಐಟಿಎಸ್) ಪಿಲಾನಿಯ ಐದನೇ ಕ್ಯಾಂಪಸ್ ಉದ್ಘಾಟಿಸಿದ್ದಾರೆ . ಇದರೊಂದಿಗೆ ಮ್ಯಾನೇಜ್‌ಮೆಂಟ್ ಮತ್ತು ಡಿಸೈನ್ ಕೋರ್ಸ್‌ಗಳನ್ನು ಸಹ ಈ ಸಂಸ್ಥೆಯಲ್ಲಿ ಸೇರಿಸಲಾಗಿದೆ.