ಕೋವಿಡ್ ತ್ವರಿತ ಚೇತರಿಕೆಗೆ ಐದು ಅಂಶ
ಮುಂಬೈ,ಫೆ.೨೫- ಸವಾಲುಗಳ ನಡುವೆಯೂ ಕೋವಿಡ್ -೧೯ ಸಾಂಕ್ರಾಮಿಕದ ಪ್ರಭಾವದಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ದೇಶಕ್ಕೆ ಸಹಾಯ ಮಾಡಿದ ಐದು ಅಂಶಗಳ ಕಾರ್ಯತಂತ್ರ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ಕೇಸ್ ಸ್ಟಡಿ ಆಗಿರಬಹುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪಾರದರ್ಶಕತೆ ಹೆಚ್ಚಳ ಮತ್ತು ಭ್ರಷ್ಟಾಚಾರ ತೊಡೆದುಹಾಕಲು ಐಟಿ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಬಳಕೆ ಪ್ರಾಥಮಿಕವಾಗಿದೆ. ಎರಡನೆಯದು “ಸಿಸ್ಟಮ್ಸ್ ಥಿಂಕಿಂಗ್” ಅಳವಡಿಕೆ ಸೇರಿದಂತೆ ಐದು ಅಂಶಗಳು ಸರ್ಕಾರದ ಕಾರ್ಯ ತಂತ್ರದ ಭಾಗವಾಗಿದೆ ಎಂದು ತಿಳಿಸಿದ್ದಾರೆ.
ಮುಂಬೈನಲ್ಲಿ ಮಾತನಾಡಿದ ಅವರು ಸರ್ಕಾರದ ಪ್ರತಿ ರೂಪಾಯಿಗೆ ಔಟ್‌ಪುಟ್-ಫಲಿತಾಂಶ ಮಾಪನ ಡ್ಯಾಶ್‌ಬೋರ್ಡ್ ಅನ್ನು ಬಳಸಿಕೊಂಡು ಕಾರ್ಯಕ್ಷಮತೆ ಆಧಾರಿತ ಬಜೆಟ್‌ನ ನಂತರದ ಕುಂದುಕೊರತೆ ಪರಿಹಾರದ ಚೌಕಟ್ಟು ಮೂರನೇ ಆಧಾರ ಸ್ತಂಭವಾಗಿದೆ ಎಂದು ಹೇಳಿದ್ದಾರೆ.
ಕಳೆದ ಒಂದು ದಶಕದಲ್ಲಿ ಶಿಕ್ಷಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. “ಪ್ರತಿ ವರ್ಷ ಒಂದು ಹೊಸ ಐಐಟಿ/ಐಐಎಂ ತೆರೆಯಲಾಗುತ್ತದೆ ಪ್ರತಿ ವಾರ, ಭಾರತದಲ್ಲಿ ಒಂದು ಹೊಸ ವಿಶ್ವವಿದ್ಯಾನಿಲಯ ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ಐಟಿಐ ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ ಸುಮಾರು ೧.೪ ಕೋಟಿ ಯುವಕರಿಗೆ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳು ಎಂಒಯುಗಳ ಮೂಲಕ ಪ್ರಯೋಜನ ಪಡೆಯಲು ವಿವಿಧ ದೇಶಗಳೊಂದಿಗೆ ಶೈಕ್ಷಣಿಕ ಅರ್ಹತೆಯ ಚೌಕಟ್ಟಿನ ಪರಸ್ಪರ ಗುರುತಿಸುವಿಕೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಬಿಟ್ಸ್ ಪಿಲಾನಿಯ ಕುಲಪತಿ ಕುಮಾರ್ ಮಂಗಲಂ ಬಿರ್ಲಾ ಅವರ ಪ್ರಕಾರ, ಸಂಸ್ಥೆಯು ೧೮,೦೦೦ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿದೆ ಮತ್ತು ೪೦,೦೦೦ ವೃತ್ತಿಪರರನ್ನು ಸೃಷ್ಠಿ ಮಾಡಲಿದೆ. ೬,೩೦೦ ಸ್ಟಾರ್ಟ್‌ಅಪ್‌ಗಳು ಹೊಂದಿದೆ ಎಂದು ತಿಳಿಸಿದ್ದಾರೆ.