ಸ್ವಾಮಿ ನಾರಾಯಣ ದೇವಾಲಯ ಧ್ವಂಸ: ಭಾರತ ದೂತವಾಸ ಖಂಡನೆ
ವಾಚಿಂಗ್ಟನ್/ವಾಷಿಂಗ್ಟನ್,ಸೆ,೧೭-ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ ಬಿಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸಗೊಳಿಸಲಾಗಿರುವ ಘಟನೆಯನ್ನು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ದೂತಾವಾಸ ತೀವ್ರವಾಗಿ ಖಂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ ೨೨ ರಂದು ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ನಡುವೆ ಬಿಪಿಎಸ್ ನಾರಾಯಣ ಸ್ವಾಮಿ ದೇವಾಲಯ ಧ್ವಂಸ ಮಾಡಿರುವುದು ಭಾರತೀಯ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.
ಈ ಕುರಿತು ಅಮೆರಿಕಾದಲ್ಲಿರುವ ದೂತಾವಾಸ ಕಚೇರಿ ಸ್ಥಳೀಯ ಭಾರತೀಯ ಅಮೆರಿಕನ್ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿದೆ ಮತ್ತು ದಾಳಿಗೆ ಕಾರಣರಾದವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಅಮೆರಿಕಾದ ಕಾನೂನು ಜಾರಿ ಸಂಸ್ಥೆಗಳನ್ನು ಒತ್ತಾಯಿಸಿದೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಪ್ರತಿಕ್ರಿಯೆ ನೀಡಿ ಅಮೆರಿಕಾದಲ್ಲಿ ತನಿಖಾ ಸಂಸ್ಥೆಗಳು ಬಿಗಿಯಾದ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುತ್ತವೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ
ಭಾರತೀಯ ದೂತಾವಾಸ ಕಚೇರಿ ಘಟನೆಯ ಬಗ್ಗೆ ದಿಗ್ಬ್ರಮೆ ವ್ಯಕ್ತಪಡಿಸಿದ್ದು, “ನ್ಯೂಯಾರ್ಕ್‌ನ ಮೆಲ್‌ವಿಲ್ಲೆಯಲ್ಲಿರುವ ಬಿಪಿಎಸ್ ಸ್ವಾಮಿನಾರಾಯಣ ದೇವಾಲಯದ ವಿಧ್ವಂಸಕ ಕೃತ್ಯ ಖಂಡನಾರ್ಹ ಎಂದಿದೆ.
ಅಮೆರಿಕಾದಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂಪರ್ಕದಲ್ಲಿದ್ದೇವೆ. ಮತ್ತು ಈ ಹೇಯ ಕೃತ್ಯದ ಅಪರಾಧಿಗಳ ವಿರುದ್ಧ ತ್ವರಿತ ಕ್ರಮಕ್ಕಾಗಿ ಅಮೇರಿಕಾದ ಕಾನೂನು ಜಾರಿ ಅಧಿಕಾರಿಗಳೊಂದಿಗೆ ಎನ್ನುವ ವಿಶ್ವಾಸ ಹೊರಹಾಕಿದ್ದಾರೆ.
ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ತುಣುಕಿನಲ್ಲಿ ಆಕ್ಷೇಪಾರ್ಹ ಗೀಚುಬರಹವನ್ನು ರಸ್ತೆಯ ಮೇಲೆ ಮತ್ತು ದೇವಾಲಯದ ಹೊರಗೆ ಸಿಗ್ನೇಜ್‌ನಲ್ಲಿ ಸಿಂಪಡಿಸಲಾಗಿದೆ. ಘಟನೆಗೆ ಪ್ರತಿಕ್ರಿಯೆ ನೀಡಲು ದೇವಸ್ಥಾನದಲ್ಲಿ ಪ್ರಾರ್ಥನಾ ಸಭೆ ನಿಗದಿಪಡಿಸಲಾಗಿದೆ.
ಹಿಂದೂ ಅಮೆರಿಕನ್ ಫೌಂಡೇಷನ್ ದೇವಸ್ಥಾನದ ದಾಳಿಯ ತನಿಖೆಗೆ ನ್ಯಾಯಾಂಗ ಇಲಾಖೆ ಮತ್ತು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಒತ್ತಾಯಿಸಿದೆ.
ಹಿಂದೂ ಅಮೆರಿಕನ್ ಫೌಂಡೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಹಾಗ್ ಶುಕ್ಲಾ ಮಾತನಾಡಿ, “ಚುನಾಯಿತ ನಾಯಕನ ದ್ವೇಷಕ್ಕಾಗಿ” ಹಿಂದೂ ದೇವಾಲಯದ ಮೇಲೆ ದಾಳಿ ಮಾಡುವವರ ಸಂಪೂರ್ಣ ಹೇಡಿತನ ಅರ್ಥಮಾಡಿಕೊಳ್ಳುವುದು ಕಷ್ಟ ಎಂದಿದ್ದಾರೆ