ಚಿರತೆ ಯೋಜನೆಗೆ ಯಶಸ್ವಿ ಎರಡು ವರ್ಷ
ಭೂಪಾಲ್,ಸೆ.೧೭- ದೇಶದಲ್ಲಿ ಮತ್ತೆ ಚರತೆಗಳ ಮರುಸೃಷ್ಟಿಗೆ ಎರಡು ವರ್ಷ ಪೂರೈಸಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿತ್ತು.
ಎರಡು ವರ್ಷಗಳ ಹಿಂದೆ ತಮ್ಮ ೭೨ನೇ ವರ್ಷದ ಹುಟ್ಟುಹಬ್ಬದಂದು ನಮೀಬಿಯಾದಿಂದ ತಂದಿದ್ದ ೮ ಚರತೆಗಳ ಮೊದಲ ತಂಡವನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು.
ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಭಾರತ ನೆಲದಲ್ಲಿ ಮತ್ತೆ ಚಿರತೆಗಳ ಮರುಸೃಷ್ಟಿಸಿರುವ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ.
ಈ ಯೋಜನೆಯನ್ನು ಪ್ರಧಾನಿ ಮೋದಿ ಅವರು ಕಳೆದು ಹೋಗಿದ್ದ ವನ್ಯಜೀವಿಗಳನ್ನು ಮತ್ತೆ ಮರುಸೃಷ್ಟಿಸಿದ್ದಾರೆ. ಈ ಯೋಜನೆಯ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಹಲವಾರು ಸವಾಲುಗಳು ಎದುರಿಸಿ ಯಶಸ್ಸು ಕಂಡಿದ್ದೇವೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಬರೆದುಕೊಂಡಿದ್ದಾರೆ.