ಆರ್‌ಜಿ ಕರ್ ಆಸ್ಪತ್ರೆ ಮೇಲೆ ಇಡಿ ದಾಳಿ
ಕೋಲ್ಕತ್ತಾ,ಸೆ.೧೭-ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಆರೋಪದ ಹಣಕಾಸು ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಬೆಳಗ್ಗೆ ತೃಣಮೂಲ ಕಾಂಗ್ರೆಸ್ ಶಾಸಕರೊಬ್ಬರ ನಿವಾಸ ಸೇರಿದಂತೆ ಕೋಲ್ಕತ್ತಾದ ಆರು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ.
ಸಿಥಿಯಲ್ಲಿರುವ ತೃಣಮೂಲ ಕಾಂಗ್ರೆಸ್‌ನ ಸೆರಾಂಪೋರ್ ಶಾಸಕ ಸುದೀಪ್ತೋ ರಾಯ್ ಅವರ ನಿವಾಸ ಮತ್ತು ಔಷಧಿ ಮಾರಾಟಗಾರರ ಮನೆ ಹೊರತುಪಡಿಸಿ, ಇತರ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.
ಈ ದಾಳಿಗಳು ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಆಪಾದಿತ ಹಣಕಾಸಿನ ಅವ್ಯವಹಾರಗಳ ತನಿಖೆಯ ಭಾಗವಾಗಿದೆ. ನಮ್ಮ ಬಳಿ ಕೆಲವು ಮಾಹಿತಿಗಳಿವೆ, ಅದರ ಆಧಾರದ ಮೇಲೆ ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಇಡಿ ಮಾಹಿತಿ ನೀಡಿದ್ದಾರೆ .
ಸಿಬಿಐ ಈಗಾಗಲೇ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಅವರ ಮೂವರು ಸಹಚರರನ್ನು ತನ್ನ ತನಿಖೆಯ ಭಾಗವಾಗಿ ಹಣಕಾಸು ಅಕ್ರಮಗಳ ತನಿಖೆಯ ಭಾಗವಾಗಿ ಬಂಧಿಸಿದೆ. ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ನಂತರ ಈ ಅಕ್ರಮಗಳು ಬೆಳಕಿಗೆ ಬಂದಿವೆ.