ಸಂಪುಟ ಸಭೆಯ ಡ್ರಾಮಾ ನಿಲ್ಲಲಿ, ಅಭಿವೃದ್ಧಿಗೆ ಮುಂದಾಗಲಿ
ವಾಡಿ:ಸೆ.16: ಸಿಎಂ ಸಿದ್ದರಾಮಯ್ಯ ಅವರು ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವುದರ ಮೂಲಕ ಅಭಿವೃದ್ಧಿಯ ಡ್ರಾಮಾಕ್ಕೆ ಮುಂದಾಗಿದ್ದಾರೆ. ಇದು ಒಂದು ದಿನದ ಸಂತೆಯಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ರಾಜ್ಯ ಸರ್ಕಾರದ ನಡೆ ಖಂಡಿಸಿದರು.
ಈ ಹಿಂದೆ ಹಲವು ಸಂಪುಟ ಸಭೆಗಳು ಕಲಬುರ್ಗಿಯಲ್ಲಿ ಜರುಗಿವೆ. ಆದರೆ ಕಿಂಚಿತ್ತು ಅಭಿವೃದ್ಧಿ ಇಲ್ಲಿ ನಡೆದಿಲ್ಲ. ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ ಮಾಡಬೇಕು ಎನ್ನುವ ಚಿಂತನೆ ಹಾಗೂ ಕನಸು ಇರದ ಕಾಂಗ್ರೆಸ್ ಪಕ್ಷ ಈ ನಾಟಕ ಶುರು ಮಾಡಿಕೊಂದಿದೆ ಎಂದು
ಗುಡುಗಿದರು.
ಕಲ್ಯಾಣ ಕರ್ನಾಟಕ ಭಾಗಕ್ಕಿರುವ ಹಿಂದುಳಿದ ವರ್ಗಗಳ ಹಣೆಪಟ್ಟಿ ಕಳಚಲು ಹಾಗೂ ಅಭಿವೃದ್ಧಿ ದೃಷ್ಟಿಯಿಂದ ನಾನು ಪಕ್ಷದ ಸಂಘಟನೆಗಾಗಿ ಯಾದಗಿರಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಮಗ, ನನ್ನ ಅಳಿಯ ಹಾಗೂ ಸೋಸೆ ಅಧಿರಾಲ್ಲಿರಬೇಕು ಎನ್ನುವ ಮನಸ್ಥಿತಿ ಹೊಂದಿರುವ ಗುಲಾಮಗಿರಿ ಪದ್ಧತಿ ಹೋಗಲಾಡಿಸಬೇಕಾಗಿದೆ ಎಂದ ಅವರು ಕುಟುಂಬ ರಾಜಕೀಯವನ್ನು ಟೀಕಿಸಿದರು
ಚಿತ್ತಾಪುರ ತಾಲ್ಲೂಕಿನಲ್ಲಿ 50 ಸಾವಿರ ಹೊಸ ಸದಸ್ಯತ್ವ ಹೊಂದುವ ಗುರಿ ಹಾಕಿಕೊಳ್ಳಬೇಕಾಗಿದೆ. ಹಲವು ಕಾರಣದಿಂದ ನಮ್ಮ ಪಕ್ಷದ ಅಭ್ಯರ್ಥಿಗಳು ಸೋತಿರಬಹುದು. ಆದರೆ ಮುಂದಿನ ಬಾರಿ ಇಲ್ಲಿ ಬಿಜೆಪಿ ಶಾಸಕರನ್ನೆ ಜನರು ಕೈಹಿಡಿದು ಆಶೀರ್ವದಿಸಲಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಯಸ್ಸು ಮುಂದಿನ ಮೂರು ತಿಂಗಳು ಕಾಲ ಮಾತ್ರ ಇರಲಿದೆ. ಈ ಸರಕಾರ ಉಳಿಯುವ ಯಾವುದೇ ಲಕ್ಷಣಗಳು ಇಲ್ಲ ಎಂದರು.
ಬಿಜೆಪಿ ಮುಖಂಡ ಬಸವರಾಜ ಪಂಚಾಳ ಮಾತನಾಡಿ, ಚಿತ್ತಾಪುರನಲ್ಲಿ ಬಿಜೆಪಿ ನಾಯಕತ್ವದ ಕೊರತೆ ನಮ್ಮನು ಕಾಡುತ್ತಿದೆ. ಭಯದ ವಾತಾವರಣದಲ್ಲಿ ನಮ್ಮ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ರಾಜ್ಯ ನಾಯಕರು ಹೆಚ್ಚಿನ ಗಮನ ಹರಿಸುವ ಮೂಲಕ ದಿಟ್ಟ ನಾಯಕನನ್ನು ಇಲ್ಲಿ ಹುಟ್ಟು ಹಾಕಬೇಕು ಎಂದರು.
ಶಿವರಾಜ ಪಾಟೀಲ್ ರದ್ದೇವಾಡಿ, ಬಸವರಾಜ ಬೇಣ್ಣೂರು ಮಾತನಾಡಿದರು.ರಾಜು ಮುಕ್ಕಣ್ಣ, ವಿಠ್ಠಲ್ ವಾಲ್ಮೀಕಿ ನಾಯಕ, ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ರಮೇಶ್ ಕಾರ್ಬಾರಿ, ರವಿ ನಾಯಕ್ ಸಿದ್ದಣ್ಣ ಕಲ್ಶೆಟ್ಟಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.