ಮಹಿಳಾ ವಕೀಲರಿಗೆ೫೦ ಸಾವಿರ ವಂಚನೆ
ಮುಂಬೈ,ಸೆ.೧೪-ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ಕರೆ ಸ್ವೀಕರಿಸಿದ ಮಹಿಳಾ ವಕೀಲರೊಬ್ಬರ ಜೀವನ ಸಂಕಷ್ಟಕ್ಕೆ ಒಳಗಾಗಿದೆ. ಮಹಿಳಾ ವಕೀಲರಿಗೆ ೫೦ ಸಾವಿರ ರೂಪಾಯಿ ಸೈಬರ್ ವಂಚನೆ ಮಾಡಿರುವ ಪ್ರಕರಣ ಅಂಧೇರಿ ಪೂರ್ವದಲ್ಲಿ ಬೆಳಕಿಗೆ ಬಂದಿದೆ.
ಗೌಪ್ಯ ತನಿಖೆಯ ನೆಪದಲ್ಲಿ ವಂಚಕರು ವಿಡಿಯೋ ಕಾಲ್ ಮೂಲಕ ತನಿಖೆಯ ಭಾಗವಾಗಿ ಬಟ್ಟೆ ಬಿಚ್ಚುವಂತೆ ಹೇಳಿ ನಂತರ ನಗ್ನ ಫೋಟೋಗಳನ್ನು ತೆಗೆದು ಅವುಗಳನ್ನು ಬಳಸಿ ಬೆದರಿಸಿ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ.ವಂಚಕರ ಜಾಲಕ್ಕೆ ಬಲಿಯಾದವರು ಅಂಧೇರಿ ಪೂರ್ವದ ೩೬ ಸಕಿನಾಕಾ ನಿವಾಸಿ ಎಂದು ಗುರುತಿಸಲಾಗಿದೆ
ಸಂತ್ರಸ್ತೆಯ ಪ್ರಕಾರ, ವಂಚಕರು ಮೊದಲು ಆಕೆಯನ್ನು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ .ಇಡಿಯಿಂದ ಬಂಧಿಸಲ್ಪಟ್ಟ ಜಾಮೀನಿನ ಮೇಲೆ ಹೊರಗಿರುವ ಜೆಟ್ ಏರ್‌ವೆಸ್ ಸಂಸ್ಥಾಪಕ ನರೇಶ್ ಗೋಯಲ್‌ಗೆ ಪ್ರಕರಣದಲ್ಲಿ ಅವರು ಭಾಗಿಯಾಗಿರುವ ಶಂಕೆ ಇದೆ ಎಂದು ಆಕೆಗೆ ತಿಳಿಸಲಾಗಿದೆ ಮತ್ತು ಗೌಪ್ಯ ತನಿಖೆಗಾಗಿ ಪೊವೈನಲ್ಲಿರುವ ಹೋಟೆಲ್‌ಗೆ ಆಗಮಿಸಲು ಹೇಳಿದ್ದಾರೆ. ಅಲ್ಲಿ ಮಹಿಳಾ ಅಧಿಕಾರಿಗಳಿಂದ ವಿಡಿಯೋ ಕಾಲ್ ಮೂಲಕ ನಿಮ್ಮನ್ನು ನಗ್ನವಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಹಿಳಾ ವಕೀಲರಿಗೆ ತಿಳಿಸಿದ್ದಾರೆ. ಇದು ವಾಡಿಕೆಯ ಪರೀಕ್ಷೆ ಮೈ ಮೇಲೆ ಯಾವುದೇ ಕಲೆ ಗಾಯದ ಗುರುತು ಇವೆಯೇ ಎಂದು ಪರೀಕ್ಷಿಸಲು ಮಾತ್ರ ಎಂದು ಅವರು ಭರವಸೆ ನೀಡಿದ್ದಾರೆ. ಅಲ್ಲದೆ ರೂ.೫೦ ಸಾವಿರ ವರ್ಗಾವಣೆ ಮಾಡುವಂತೆ ಮನವಿ ಮಾಡಿದರು. ಈ ಎಲ್ಲ ಸಂಗತಿಗಳನ್ನು ರಹಸ್ಯವಾಗಿಡುವಂತೆ ಯಾರಿಗೂ ಹೇಳಬೇಡಿ ಎಂದು ತಾಕೀತು ಮಾಡಿದ್ದಾರೆ.ಯಾರಿಗೂ ಹೇಳಬೇಡಿ ಎಂದು ಮಹಿಳೆಗೆ ಹೇಳಿರುವುದು ರಹಸ್ಯವಾಗಿತ್ತು. ಮಹಿಳೆ ವಕೀಲರು ಒಪ್ಪಿಗೆ ಸೂಚಿಸಿ ಅವರು ಹೇಳಿದಂತೆ ನಡೆದುಕೊಂಡಿದ್ದಾರೆ.
ಬಳಿಕ ಆರೋಪಿಗಳು ಮಹಿಳೆಗೆ ಹಲವು ಬಾರಿ ಕರೆ ಮಾಡಿದ್ದಾರೆ. ಮಹಿಳೆ ಫೋನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ, ಆಕೆಗೆ ಇ-ಮೇಲ್ ಕಳುಹಿಸಲಾಗಿದೆ. ಇದರಲ್ಲಿ ಬಟ್ಟೆ ಇಲ್ಲದ ಆಕೆಯ ನಗ್ನ ಚಿತ್ರಗಳನ್ನು ಕಳುಹಿಸಿ ಆಕೆಯಿಂದ ಹಣ ಕೇಳಲಾಗಿದೆ. ಮಹಿಳೆಗೆ ತಾನು ಮೋಸ ಹೋಗಿರುವುದು ಅರಿವಾದಾಗ. ಗಂಡನಿಗೆ ಎಲ್ಲವನ್ನೂ ಹೇಳಿದಳು. ನಂತರ ವಕೀಲೆ ಪೊಲೀಸರನ್ನು ಸಂಪರ್ಕಿಸಿ ದೂರ ದಾಖಲಿಸಿದ್ದಾರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಂಚಕನು ತಾನು ಟೆಲಿಕಾಂ ಪ್ರಾಧಿಕಾರದವನೆಂದು ಹೇಳಿಕೊಂಡಿದ್ದಾನೆ ಮತ್ತು ತನ್ನ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಹಣ ವರ್ಗಾವಣೆ ಚಟುವಟಿಕೆಗಳಿಗೆ ಬಳಸಲಾಗಿದೆ ಎಂದು ವಕೀಲೆ ಪೊಲೀಸರಿಗೆ ತಿಳಿಸಿದ್ದಾಳೆ.