ಅಮೀನ್ ನಾಪತ್ತೆ: ಸೇನೆ ನಿರ್ಲಕ್ಷ್ಯಕ್ಕೆ ಇಮ್ರಾನ್ ಆಕ್ಷೇಪ
ಇಸ್ಲಾಮಾಬಾದ್,ಸೆ,೧೪-ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ವಾಯುವ್ಯ ಖೈಬರ್ ಪಖ್ತುನ್ಖಾಪ್ರಾಂತ್ಯದ ಮುಖ್ಯಮಂತ್ರಿ ಅಲಿ ಅಮೀನ್ ಗಂಡಪುರ್ ಇಸ್ಲಾಮಾಬಾದ್‌ನಿಂದ ನಾಪತ್ತೆಯಾಗಿದ್ದರೂ ಅವರ ಪತ್ತೆ ಮಾಡದೆ ಸೇನೆ ಸುಮ್ಮನಿದೆ ಎಂದು ಪಕ್ಷದ ಅಧ್ಯಕ್ಷ ಮುಖ್ಯಸ್ಥ ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ರಾವಲ್ಪಿಂಡಿ ಜೈಲಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಇಮ್ರಾನ್ ಖಾನ್, ಪಕ್ಷದ ಮುಖ್ಯಮಂತ್ರಿಯೊಬ್ಬರು ನಾಪತ್ತೆಯಾಗಿದ್ದರೂ ಅವರನ್ನು ಪತ್ತೆ ಮಾಡುವ ಕೆಲಸ ಮಾಡಿಲ್ಲ, ಇದರಲ್ಲಿ ಸೇನೆ ವಿಫಲವಾಗಿದೆ ಎಂದು ದೂರಿದ್ದಾರೆ
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಅನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು ಇಂತಹ ಕ್ರಮಗಳಿಗೆ ಯಾರು ಹೊಣೆ ಎಂದು ಎಲ್ಲರಿಗೂ ತಿಳಿದಿದೆ. ಮಿಲಿಟರಿ ಸ್ಥಾಪನೆ ದೇಶದ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ
ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅವರು ಕಣ್ಮರೆಯಾಗಿದ್ದರೂ ಸೇನೆ ಮೌನವಾಗಿದೆ ದೇಶದ ಪ್ರಸ್ತುತ ಪರಿಸ್ಥಿತಿಯು “ಯಾಹ್ಯಾ ಖಾನ್ ಭಾಗ- ೨ರನ್ನು ನೆನಪಿಸುತ್ತಿದೆ ಎಂದಿದ್ಧಾರೆ
ಪ್ರಧಾನಿ ಶೆಹಬಾಜ್ ಷರೀಫ್ ಅವರು ಪ್ರತಿ ನಿರ್ಧಾರಕ್ಕೂ ಮಿಲಿಟರಿಯಿಂದ ಅನುಮೋದನೆಯ ಅಗತ್ಯವಿದೆ ಮತ್ತು ಶೀಘ್ರದಲ್ಲೇ ಇದೇ ರೀತಿಯ ಭವಿಷ್ಯವನ್ನು ಎದುರಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ
ಕಾನೂನು ಮತ್ತು ಸುವ್ಯವಸ್ಥೆ ವಿಷಯಗಳ ಬಗ್ಗೆ ಚರ್ಚಿಸಲು ಮಿಲಿಟರಿ ಅಧಿಕಾರಿಗಳು ಆಹ್ವಾನಿಸಿ ಒಪ್ಪಿಗೆಯಿಲ್ಲದೆ ಬಂಧಿಸಿ ಬಿಡುಗಡೆ ಮಾಡಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ
ಮೂರು ದಶಕಗಳ ಕಾಲ ಪ್ರಬಲ ಮಿಲಿಟರಿ ನೇರವಾಗಿ ದೇಶವನ್ನು ಆಳಿದ ಮತ್ತು ನಾಗರಿಕ ಸರ್ಕಾರಗಳು ಅಧಿಕಾರದಲ್ಲಿದ್ದಾಗಲೂ ಅಗಾಧವಾದ ರಾಜಕೀಯ ಪ್ರಭಾವ ಹೊಂದಿರುವ ಸೇನೆಯ ಆಢಳಿತರಿಂದ ದೇಶದಲ್ಲಿ ತೀವ್ರ ಹಿನ್ನಡೆ ಉಂಟುಮಾಡಿದೆ ಎಂದಿದ್ದಾರೆ