ಜೀರಳೆ ಕಂಡರೆ ಬಿಗ್ ಬಿಗೆ ಭಯ
ಮುಂಬೈ,ಸೆ.೧೩-ಅಮಿತಾಬ್ ಬಚ್ಚನ್ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ಪತಿ ೧೬ ನ ನಿರೂಪಕರಾಗಿದ್ದಾರೆ. ಬಿಗ್ ಬಿ ಕಾರ್ಯಕ್ರಮದ ಸ್ಪರ್ಧಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಮಾತನಾಡಿದ್ದಾರೆ. ಕೆಲವು ಸ್ಪರ್ಧಿಗಳು ತಮ್ಮ ಜೀವನದ ಅನುಭವಗಳನ್ನು ಈ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಬಿಗ್ ಬಿ ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನಿಸುತ್ತಾರೆ. ಬಿಗ್ ಬಿ ಅವರಿಗೆ ಉತ್ತರಿಸುವಾಗ ತಮ್ಮ ಜೀವನದ ನೆನಪುಗಳನ್ನು ಆಗಾಗ್ಗೆ ಹೇಳುತ್ತಾರೆ.
ಇತ್ತೀಚಿನ ಸಂಚಿಕೆಯಲ್ಲಿ ಅವರು ತಮ್ಮ ಭಯದ ಬಗ್ಗೆ ಹೇಳಿದ್ದಾರೆ. ಬಿಗ್ ಬಿ ಮತ್ತು ಸ್ಪರ್ಧಿ ಪ್ರಣತಿ ನಡುವೆ ಜೇಡಗಳು ಮತ್ತು ಜಿರಳೆಗಳ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಅಮಿತಾಬ್ ಬಚ್ಚನ್ ಅವರು ಜಿರಳೆಗಳೆಂದರೆ ತಮಗೆ ವಿಪರೀತ ಭಯ ಎಂದು ಹೇಳಿದ್ದಾರೆ. ಜಿರಳೆಗಳನ್ನು ಕೊಲ್ಲಲು ತಾನು ಎಷ್ಟೆಲ್ಲಾ ಪ್ರಯತ್ನ ಪಟ್ಟಿದ್ದೇನೆ ಎಂಬುದನ್ನೂ ಹೇಳಿಕೊಂಡಿದ್ದಾರೆ.
ಸ್ಪರ್ಧಿ ಪ್ರಣತಿ ಅಮಿತಾಬ್ ಬಚ್ಚನ್ ಎದುರು ಹಾಟ್‌ಸೀಟ್‌ನಲ್ಲಿದ್ದಾರೆ. ಅಮಿತಾನ್ ಬಚ್ಚನ್ ಅವರೊಂದಿಗೆ ಜೇಡದ ಕಾಲುಗಳ ಸಂಖ್ಯೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಪ್ರಣತಿ ಹೇಳಿದ್ದು ಜಿರಲೆಯ ಕಾಲುಗಳನ್ನೂ ಎಣಿಸುವುದು ಕಷ್ಟ ಎಂದು,ಈ ಕುರಿತು ಮಾತನಾಡಿದ ಅಮಿತಾಬ್ ಬಚ್ಚನ್, ನನಗೂ ಜಿರಳೆಗಳೆಂದರೆ ಭಯ. ಅವು ಸಾಯುವುದಿಲ್ಲ. ಅವುಗಳನ್ನು ಕೊಲ್ಲಲು ಹಲವು ಪ್ರಯೋಗಗಳನ್ನು ಮಾಡಿದ್ದೇನೆ. ಒಮ್ಮೆ ನಾನು ಬಾಟಲಿಯನ್ನು ತೆಗೆದುಕೊಂಡು ತುಂಬಾ ಕಷ್ಟಪಟ್ಟು ಅದರೊಳಗೆ ಕೀಟಗಳನ್ನು ಕೊಲ್ಲುವ ಪುಡಿಯನ್ನು ಸುರಿದೆ. ನಾನು ಜಿರಳೆ ಹಿಡಿದು ಬಾಟಲಿಯೊಳಗೆ ಹಾಕಿದೆ.
ಆದರೆ ಕಥೆ ಇಲ್ಲಿಗೆ ಮುಗಿಯಲಿಲ್ಲ ಎಂದು ತಿಳಿಸಿದ ಅಮಿತಾಬ್ ಬಚ್ಚನ್ ಒಂದು ವಾರದ ನಂತರ, ನಾನು ಬಾಟಲಿಯನ್ನು ತೆರೆದಾಗ, ಜಿರಳೆ ಬಾಟಲಿಯಿಂದ ಹೊರಬಂದು ಹಾರಿಹೋಯಿತು ಎಂದಿದ್ದಾರೆ. ತೆರೆ ಮೇಲೆ ವಿಲನ್ ಗಳನ್ನು ಹಣ್ಣು ಗಾಯಿ ನೀರು ಗಾಯಿ ಮಾಡುವ ಅಮಿತಾಭ್ ಬಚ್ಚನ್ ಕೇವಲ ಒಂದು ಜೀರಳೆಗೆ ಭಯಪಡುವ ಅವರ ಜೀವನದ ಈ ತಮಾಷೆಯ ಕಥೆಯನ್ನು ಕೇಳಿ ಅಲ್ಲಿದ್ದ ಎಲ್ಲರಲ್ಲೂ ನಗೆ ಹಬ್ಬಿದೆ.