ಇರಾನ್ ಮೇಲೆ ಅಮೆರಿಕಾ ದಾಳಿಗೆ ಬಯಸಿದೆಯೇ
ವಾಷಿಂಗ್ಟನ್,ಅ,೫- ಇಸ್ಲಾಮಿಕ್ ಗಣರಾಜ್ಯದ ಮೇಲಿನ ಇತ್ತೀಚಿನ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್ ದಾಳಿ ಮಾಡಬೇಕೆಂದು ಅಮೆರಿಕಾ ಬಯಸಿದೆಯೇ ಎಂದು ಮಾಜಿ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ
ಉತ್ತರ ಕೆರೊಲಿನಾದಲ್ಲಿ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್,ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಇಸ್ರೇಲ್ ಗುರಿಯಾಗಿಸುವ ಸಾಧ್ಯತೆಯ ಬಗ್ಗೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರ ಹೇಳಿಕೆ ಉಲ್ಲೇಖಿಸಿ ಉತ್ತರ ನೀಡಿ ಎಂದಿದ್ದಾರೆ
ಇರಾನ್ ಬಗ್ಗೆ ಏನು ಯೋಚಿಸುತ್ತೀರಿ, ನೀವು ಇರಾನ್ ಮೇಲೆ ದಾಳಿ ಮಾಡುತ್ತೀರಾ ಅಥವಾ ಬೆಂಬಲಿಸುತ್ತೀರಾ ಎನ್ನುವುದನ್ನು ಅಮೆರಿಕಾದ ಜನರ ಮುಂದೆ ಸ್ಪಷ್ಟಪಡಿಸಿ ಎಂದಿದ್ದಾರೆ.
ಮುಂದಿನ ತಿಂಗಳು ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಅವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರೀಸ್ ಮತ್ತು ಅಮೆರಿಕಾ ಅಧ್ಯಕ್ಷರನ್ನು ಗುರಿಯಾಗಿಸಿಕೊಂಡು ಪದೇ ಪದೇ ದಾಳಿ ನಡೆಸುತ್ತಿದ್ದಾರೆ.
ಇಸ್ರೇಲ್ ಕಡೆಗೆ ಸುಮಾರು ೨೦೦ ಇರಾನ್ ಕ್ಷಿಪಣಿಗಳನ್ನು ಹಾರಿಸುವುದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್‌ನ ಪರಮಾಣು ಸೌಲಭ್ಯಗಳ ವಿರುದ್ಧದ ಇಂತಹ ದಾಳಿಗಳಿಗೆ ಅಮೆರಿಕಾ ಜೋ ಬೈಡೆನ್ ಹೇಳಿದ್ದಾರೆ
ಇಸ್ರೇಲಿಗಳೊಂದಿಗೆ ಅವರು ಏನು ಮಾಡಲಿದ್ದೇವೆ ಎಂಬುದನ್ನು ಚರ್ಚಿಸುತ್ತೇವೆ” ಜಿ-೭ ಸದಸ್ಯರು ಇಸ್ರೇಲ್ “ಪ್ರತಿಕ್ರಿಯಿಸುವ ಹಕ್ಕಿದೆ, ಆದರೆ ಅವರು ಪ್ರಮಾಣದಲ್ಲಿ ಪ್ರತಿಕ್ರಿಯಿಸಬೇಕು” ಎಂದು ಹೇಳಿದ್ದಾರೆ