ಅರ್ಹರೆಲ್ಲರೂ ಮತ ಚಲಾಯಿಸಿ
ನವದೆಹಲಿ,ಅ.೫- ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಅರ್ಹ ಮತದಾರರೆಲ್ಲರೂ ಮನೆಗಳಿಂದ ಹೊರಬಂದು ಮತಹಾಕಿ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ
“ರಾಜ್ಯದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮನೆಗಳಿಂದ ಹೊರಗೆ ಬಂದು ಕಾಂಗ್ರೆಸ್‌ಗೆ ಮತ ಚಲಾಯಿಸಿ”ಹರಿಯಾಣದ ನನ್ನ ಸಹೋದರ ಸಹೋದರಿಯರೇ, ರಾಜ್ಯದಲ್ಲಿ ಅತ್ಯಂತ ಮಹತ್ವದ ಚುನಾವಣೆಯಿದೆ. ರಾಜ್ಯದ ಎಲ್ಲಾ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮನೆಗಳಿಂದ ಹೊರಬಂದು ಕಾಂಗ್ರೆಸ್‌ಗೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ರೈತರ ಏಳಿಗೆಗಾಗಿ ಯುವಕರ ಉದ್ಯೋಗಕ್ಕಾಗಿ ಮಹಿಳೆಯರ ಸುರಕ್ಷತೆ ಮತ್ತು ಗೌರವಕ್ಕಾಗಿ ಪ್ರತಿ ವರ್ಗದ ಭಾಗವಹಿಸುವಿಕೆಗಾಗಿ ಸಾಮಾಜಿಕ ಭದ್ರತೆಗಾಗಿ ಪ್ರತಿ ಕುಟುಂಬದ ಯೋಗಕ್ಷೇಮಕ್ಕಾಗಿ ನೀವು ಕಾಂಗ್ರೆಸ್‌ಗೆ ನೀಡುವ ಪ್ರತಿಯೊಂದು ಮತವೂ ಸಂವಿಧಾನವನ್ನು ರಕ್ಷಿಸುತ್ತದೆ ಮತ್ತು ನಿಮ್ಮದಾಗುತ್ತದೆ. ಬಿಜೆಪಿಯ ದೌರ್ಜನ್ಯದ ವಿರುದ್ಧ ಇದುವೇ ಅಸ್ತ್ರ ಎಂದಿದ್ದಾರೆ
ಹರಿಯಾಣದಲ್ಲಿ ೩೬ ಸಮುದಾಯಗಳ ಸರ್ಕಾರ ರಚನೆಯಾಗಬೇಕು, ಎಲ್ಲರ ಸಹಭಾಗಿತ್ವದ ಸರ್ಕಾರ, ನ್ಯಾಯದ ಸರ್ಕಾರ ಕಾಂಗ್ರೆಸ್ ಸರ್ಕಾರ ಎಂದು ಅವರು ತಿಳಿಸಿದ್ದಾರೆ.