ಮಲೈಕಾ ತಂದೆ ಮರಣೋತ್ತರ ವರದಿ ಬಹಿರಂಗ
ನವದೆಹಲಿ ,ಸೆ.೧೩-ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಕುಲದೀಪ್ ಮೆಹ್ತಾ ಅವರು ಬುಧವಾರ (ಸೆಪ್ಟೆಂಬರ್ ೧೨) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲಗಳ ಪ್ರಕಾರ, ಮೆಹ್ತಾ ಅವರು ತಮ್ಮ ಮನೆಯ ಆರನೇ ಮಹಡಿಯ ಬಾಲ್ಕನಿಯಿಂದ ಜಿಗಿಯುವ ಸಂದರ್ಭದಲ್ಲಿ ತಲೆ, ಕಾಲು ಮತ್ತು ಕೈಗಳಿಗೆ ಅನೇಕ ಯಗಳಾಗಿದ್ದು, ಅದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿಯು ಬಹಿರಂಗಪಡಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮುಂಬೈ ಪೊಲೀಸರ ಪ್ರಕಾರ, ಬಾಂದ್ರಾದ ಐಷಾರಾಮಿ ಅಲ್ಮೇಡಾ ಪಾರ್ಕ್ ಪ್ರದೇಶದ ಆಯೆಶಾ ಮ್ಯಾನರ್ ನಲ್ಲಿ ಬುಧವಾರ ಬೆಳಿಗ್ಗೆ ೯ ಗಂಟೆಗೆ ಈ ಘಟನೆ ನಡೆದಿದೆ. ೬೫ ವರ್ಷದ ಅನಿಲ್ ಮೆಹ್ತಾ ಅವರು ಕಟ್ಟಡದ ಬಾಲ್ಕನಿಯಿಂದ ಜಿಗಿದಿದ್ದಾರೆ, ಇದರ ಪರಿಣಾಮವಾಗಿ ಅವರ ಬಲಗಾಲು ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ಮುರಿತವಾಗಿದೆ. ಆಸ್ಪತ್ರೆಗೆ ಕರೆದೊಯ್ದರೂ, ಮೆಹ್ತಾ ಅವರು ಬರುವಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೆಹ್ತಾ ತನ್ನ ಪುತ್ರಿಯರಾದ ಮಲೈಕಾ ಮತ್ತು ಅಮೃತಾ ಅರೋರಾ ಅವರಿಗೆ ಕೊನೆಯ ಕರೆ ಮಾಡಿದ್ದರು. ಈ ಕರೆಯ ಸಮಯದಲ್ಲಿ, ನನಗೆ ಅನಾರೋಗ್ಯ ಮತ್ತು ದಣಿದಿದೆ ಎಂದು ಅವರು ಹೇಳಿದ್ದಾರೆ .ಇದ್ದಕ್ಕಿದ್ದಂತೆ ಫೋನ್ ಸಂಪರ್ಕ ಕಡಿತಗೊಳಿಸಿ ಸ್ವಿಚ್ ಆಫ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಧಿಕಾರಿಗಳು ಈಗಾಗಲೇ ಸಂಬಂಧಿಕರು ಮತ್ತು ಕಟ್ಟಡದ ನಿವಾಸಿಗಳಿಂದ ಹೇಳಿಕೆಗಳನ್ನು ತೆಗೆದುಕೊಂಡಿದ್ದಾರೆ.
ಫೋರೆನ್ಸಿಕ್ ತಂಡವು ಘಟನೆಯ ಸ್ಥಳವನ್ನು ತನಿಖೆ ಮಾಡಿದೆ, ಇದು ವೀಡಿಯೋ ರೆಕಾರ್ಡಿಂಗ್ ಮತ್ತು ಆವರಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುವುದನ್ನು ಒಳಗೊಂಡಿದೆ. ಘಟನೆಯ ಮೊದಲು ಮೆಹ್ತಾ ಅವರ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ಮೆಹ್ತಾ ಅವರ ವೈದ್ಯರು ಮತ್ತು ಇತರ ಸಂಬಂಧಪಟ್ಟ ವ್ಯಕ್ತಿಯ ಹೇಳಿಕೆಗಳನ್ನು ದಾಖಲಿಸಲು ಪೊಲೀಸರು ಯೋಜಿಸಿದ್ದಾರೆ ಎನ್ನಲಾಗಿದೆ.