ಅ.18 ರಿಂದ ಪ್ರೊ ಕಬಡ್ಡಿ ಲೀಗ್ ಆರಂಭ
ನವದೆಹಲಿ.ಸೆ.೧೨- ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌ನ ೧೧ನೇ ಆವೃತ್ತಿ ಅ.೧೮ ರಿಂದ ಶುರುವಾಗಲಿದೆ. ಹೈದಾಬಾದ್ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇದೇ ದಿನ ನಡೆಯಲಿರುವ ೨ನೇ ಪಂದ್ಯದಲ್ಲಿ ಯು ಮುಂಬಾ ಹಾಗೂ ದಬಾಂಗ್ ಡೆಲ್ಲಿ ತಂಡಗಳು ಸಹ ಸೆಣಸಲಿದೆ.
ಬೆಂಗಳೂರು ಬುಲ್ಸ್ ತಂಡವು ಹೈದರಾಬಾದ್‌ನಲ್ಲಿ ಒಟ್ಟು ೮ ಪಂದ್ಯಗಳನ್ನಾಡಲಿದೆ. ಅ.೧೮ ತೆಲುಗು ಟೈಟಾನ್ಸ್, ಅ. ೨೦ ಗುಜರಾತ್ ಜೈಂಟ್ಸ್, ಅ. ೨೨ ರಂದು ಯುಪಿ ಯೋಧಾ, ಅ.೨೫ ರಂದು ಪುಣೇರಿ ಪಲ್ಟನ್,ಅ. ೨೯ ರಂದು ದಬಾಂಗ್ ಡೆಲ್ಲಿ,ನ. ೨ ರಂದು ತೆಲುಗು ಟೈಟಾನ್ಸ್, ನ.೪ ರಂದು ತಮಿಳ್ ತಲೈವಾಸ್, ನ.೯ ರಂದು ಬೆಂಗಾಳ್ ವಾರಿಯರ್ಸ್ ವಿರುದ್ಧ ಸೆಣಸಲಿದೆ.
ಇನ್ನು ನೋಯ್ಡಾದಲ್ಲಿ ನಡೆಯಲಿರುವ ೨ನೇ ಸುತ್ತಿನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ನ.೧೨ ರಂದು ಜೈಪುರ ಪಿಂಕ್ ಪ್ಯಾಂಥರ್ಸ್.ನ.೧೬ ರಂದು ದಬಾಂಗ್ ಡೆಲ್ಲಿ ಹಾಗೂ ನ.೧೮ ರಂದು ಯು ಮುಂಬಾ ತಂಡಗಳನ್ನು ಎದುರಿಸಲಿದೆ. ಇನ್ನು ನ.೧೯ ರಂದು ಪಾಟ್ನಾ ಪೈರೇಟ್ಸ್, ನ.೨೧, ೨೫ ಮತ್ತು ೩೦ ರಂದು ಕ್ರಮವಾಗಿ ಹರ್ಯಾಣ ಸ್ಟೀಲರ್ಸ್, ಯು ಮುಂಬಾ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳನ್ನು ಎದುರಿಸಲಿದೆ.
ಡಿ. ೩ ರಿಂದ ಶುರುವಾಗಲಿರುವ ಮೂರನೇ ಸುತ್ತಿನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಡಿ.೧೦ ರಂದು ಗುಜರಾತ್ ಜೈಂಟ್ಸ್, ಡಿಸೆಂಬರ್ ೧೧ ಬೆಂಗಾಳ್ ವಾರಿಯರ್ಸ್, ನಂತರ ಹರ್ಯಾಣ ಸ್ಟೀಲ್ಟರ್ ತಂಡದ ವಿರುದ್ಧ ಕಣಕ್ಕಿಳಿಯಲಿದೆ. ಇನ್ನು ಡಿಸೆಂಬರ್ ೧೩ ರಂದು ಪುಣೇರಿ ಪಲ್ಟನ್, ಡಿ.೧೭ ರಂದು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು, ಡಿ.೨೨ ರಂದು ತಮಿಳ್ ತಲೈವಾಸ್ ತಂಡಗಳನ್ನು ಎದುರಿಸಲಿದೆ. ಡಿ. ೨೪ ರಂದು ನಡೆಯಲಿರುವ ಲೀಗ್ ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯುಪಿ ಯೋಧಾಸ್ ತಂಡಗಳು ಮುಖಾಮುಖಿಯಾಗಲಿದೆ.