ಹಾಡಿನಿಂದ ಮನಗೆದ್ದ ೩ ವರ್ಷದ ಪುಟಾಣಿ
ನ್ಯೂಯಾರ್ಕ್,ಸೆ.೧೨-೩ ವರ್ಷದ ಬಾಲಕಿಯ ಏಂಜೆಲಿಕಾ ಹಾಡಿರುವ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ, ಹುಡುಗಿ ಟೈಟಾನಿಕ್ ಚಿತ್ರದ ಪ್ರಸಿದ್ಧ ಹಾಡು ಮೈ ಹಾರ್ಟ್ ವಿಲ್ ಗೋ ಆನ್ ಹಾಡನ್ನು
ಪುಟಾಣಿ ಬಾಲಕಿ ಹಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಎಷ್ಟು ಜನಪ್ರಿಯವಾಗಿದೆ ಎಂದರೆ ಅದನ್ನು ೨೦೦ ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.ಕಳೆದ ಕೆಲವು ದಿನಗಳಲ್ಲಿ ಯಾವುದೇ ರೀಲ್‌ಗಳು ಇಷ್ಟು ವೀಕ್ಷಣೆಗಳನ್ನು ಪಡೆದಿಲ್ಲ.
ಏಂಜೆಲಿಕಾಳ ಗಾಯನ ಶೈಲಿ, ಧ್ವನಿ, ನಗು ಎಷ್ಟು ಆಕರ್ಷಕವಾಗಿದೆ ಎಂದರೆ ಹಾಡು ಆಲಿಸಿದ ಎಲ್ಲರೂ ಅವಳ ಮೋಡಿಯಿಂದ ಹೊರ ಬರಲು ಸಾಧ್ಯವಿಲ್ಲ. ಆಕೆಯ ಮಧುರ ಧ್ವನಿ ಮತ್ತು ಪಿಯಾನೋದ ಭಾವಪೂರ್ಣ ರಾಗ ಕೇಳುಗರನ್ನು ಮಂತ್ರಮುಗ್ಧಗೊಳಿಸಿದೆ. ಈ ದೃಶ್ಯವು ಎಷ್ಟು ಸುಂದರ ಕ್ಷಣವಾಗಿತ್ತು, ಹೃದಯಸ್ಪರ್ಶಿಯಾಗಿತ್ತು ಎಂದರೆ ಪ್ರೇಕ್ಷಕರು ಕ್ಷಣ ಕಾಲ ಮಾತು ಬಾರದೆ ಮೂಕರಾದರು ಈ ಮೂರು ವರ್ಷದ ಗಾಯಕಿ, ಏಂಜೆಲಿಕಾ ನೀರೋ, ಅವಳೊಂದಿಗೆ ಟೈಟಾನಿಕ್ ನುಡಿಸಲು ನನ್ನನ್ನು ಕೇಳಿದಳು ಎಂದು ಪಿಯಾನೋ ವಾದಕ ರೀನೆರ್ಟ್ಮ ಶೀರ್ಷಿಕೆ ನೀಡಿ ಮಾಡಿದ ವಿಡಿಯೋ ಶರವೇಗದಲ್ಲಿ ವೈರಲ್ ಆಗಿದೆ.
ಈ ಹಾಡು ೧೯೯೭ ರ ಸರಿಸಾಟಿ ಇಲ್ಲದೆ ರೋಮ್ಯಾಂಟಿಕ್ ಚಲನಚಿತ್ರ ಟೈಟಾನಿಕ್ ಥೀಮ್ ಸಾಂಗ್ ಆಗಿದೆ.
ಮೈ ಹಾರ್ಟ್ ವಿಲ್ ಗೋ ಆನ್’ ಹಾಡನ್ನು ಮೂಲತಃ ಕೆನಡಾದ ಗಾಯಕಿ ಸೆಲಿನ್ ಡಿಯೋನ್ ಹಾಡಿದ್ದಾರೆ. ಈ ಹಾಡನ್ನು ೧೯೯೭ ರ ಟೈಟಾನಿಕ್ ಚಲನಚಿತ್ರದಲ್ಲಿ ಬಳಸಲಾಗಿದೆ. ಇದನ್ನು ವಿಲ್ ಜೆನ್ನಿಂಗ್ಸ್ ಸಾಹಿತ್ಯದೊಂದಿಗೆ ಜೇಮ್ಸ್ ಹಾರ್ನರ್ ಸಂಯೋಜಿಸಿದ್ದಾರೆ ಮತ್ತು ಹಾರ್ನರ್, ವಾಲ್ಟರ್ ಅಫನಾಸಿಫ್ ಮತ್ತು ಸೈಮನ್ ಫ್ರಾಂಗ್ಲೆನ್ ನಿರ್ಮಿಸಿದ್ದಾರೆ.