ತಂದೆಯ ಭಾವಾನಾತ್ಮಕ ಪೋಸ್ಟ್ ಹಂಚಿಕೊಂಡ ಮಲೈಕಾ
ಮುಂಬೈ,ಸೆ.೧೨-ಮಲೈಕಾ ಅರೋರಾ ತಂದೆ ಅನಿಲ್ ಕುಲದೀಪ್ ಮೆಹ್ತಾ ಆತ್ಮಹತ್ಯೆ ಸುದ್ದಿ ಹೊರಬಿದ್ದಿದ್ದು ಚಿತ್ರ ಜಗತ್ತು ಕಂಬನಿ ಮಿಡಿದಿದೆ. ಅನಿಲ್ ಮೆಹ್ತಾ ಅವರು ತಮ್ಮ ಅಪಾರ್ಟ್‌ಮೆಂಟ್‌ನ ಮಹಡಿಯಿಂದ ಜಿಗಿದು ಸಾವನ್ನು ಅಪ್ಪಿಕೊಂಡಿದ್ದಾರೆ.
ತಂದೆ ಅನಿಲ್ ಮೆಹ್ತಾ ಅವರ ಹಠಾತ್ ಅಗಲಿಕೆ ನಂತರ, ಮಲೈಕಾ ಅರೋರಾ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಭಾವನಾತ್ಮಕ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ.
ನಟಿ ಮಲೈಕಾ ಅರೋರಾ ಅವರು ತಮ್ಮ ತಂದೆಯ ಸಾವಿನಿಂದ ಉಂಟಾಗಿರುವ ದುಃಖದಿಂದ ಹೊರ ಬರಲು ಸಾಧ್ಯವಾಗತ್ತಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.ಜೊತೆಗೆ ತಂದೆಯೊಂದಿಗೆ ಇದ್ದ ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ.
ನನ್ನ ಪ್ರೀತಿಯ ತಂದೆ ಅನಿಲ್ ಮೆಹ್ತಾ ಅವರ ನಿಧನವನ್ನು ಘೋಷಿಸಲು ನಮಗೆ ತುಂಬಾ ದುಃಖವಾಗಿದೆ. ಅವರ ಸೌಮ್ಯ ಆತ್ಮಕ್ಕೆ ಶಾಂತಿ ಸಿಗಲಿ. ಅವರು ನಿಷ್ಠಾವಂತ ಅಜ್ಜ, ಪ್ರೀತಿಯ ಪತಿ ಮತ್ತು ನಮ್ಮ ಉತ್ತಮ ಸ್ನೇಹಿತ. ಈ ನಷ್ಟದಿಂದ ನಮ್ಮ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಈ ಕಷ್ಟದ ಸಮಯದಲ್ಲಿ ನಾವು ಮಾಧ್ಯಮಗಳು ಮತ್ತು ಹಿತೈಷಿಗಳಿಂದ ಗೌಪ್ಯತೆಯನ್ನು ಕೋರುತ್ತೇವೆ. ನಿಮ್ಮ ತಿಳುವಳಿಕೆ, ಬೆಂಬಲ ಮತ್ತು ಗೌರವವನ್ನು ನಾವು ಪ್ರಶಂಸಿಸುತ್ತೇವೆ. ಹುಡುಗರೇ, ಮಲೈಕಾ, ಅಮೃತಾ, ಶಕೀಲ್, ಅರ್ಹಾನ್, ರಯಾನ್, ಅಜಾನ್, ಕ್ಯಾಸ್ಪರ್, ಆಕ್ಸಲ್, ಡಫಿ ಮತ್ತು ಬಡ್ಡಿ ಅವರಿಗೆ ಧನ್ಯವಾದಗಳು ಎಂದು ಅವರು ಭಾವನಾತ್ಮಕ ಪೋಸ್ಟ್ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ನೋಡಿದ ಅಭಿಮಾನಿಗಳು ಹಾಗೂ ತಾರೆಯರು ಮಲೈಕಾ ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತಿದ್ದಾರೆ ಮತ್ತು ಈ ದುಃಖದ ಕ್ಷಣದಲ್ಲಿ ಅರೋರಾ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.