ಹ್ಯಾರಿಸ್ ಧರಿಸಿದ್ದ ಇಯರ್ ಫೋನ್ ಜಾಲತಾಣದಲ್ಲಿ ಭಾರೀ ಸದ್ದು
ವಾಷಿಂಗ್ಟನ್,ಸೆ.೧೨- ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳಾದ ಕಮಲಾ ಹ್ಯಾರೀಸ್ ಮತ್ತು ಡೋನಾಲ್ಡ್ ಟ್ರಂಪ್ ಅವರ ಮುಖಾಮುಖಿ ಚರ್ಚೆಯ ವೇಳೆ ಕಮಲಾ ಹ್ಯಾರೀಸ್ ಇಯರ್ ಫೋನ್ ಧರಿಸಿದ್ದರಾ ಎನ್ನುವ ಚರ್ಚೆ ಆರಂಭವಾಗಿದೆ.
ಚರ್ಚೆಯ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸುವ ವಿಷಯಕ್ಕೆ ತಿರುಗೇಟು ನೀಡಲು ಕಮಲಾ ಹ್ಯಾರೀಸ್ ಇಯರ್ ಫೊನ್ ಧರಿಸಿದ್ದರು ಎನ್ನುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಡೊನಲ್ಡ್ ಟ್ರಂಪ್ ಬೆಂಬಲಿಗರು ಕಮಲಾ ಹ್ಯಾರಿಸ್‌ನ ವಿಶಿಷ್ಟವಾದ ಕಿವಿಯೋಲೆ ಧರಿಸಿದ್ದಾರೆ. ಅದರಲ್ಲಿ ಇಯರ್ ಫೋನ್ ಧರಿಸಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಕಮಲಾ ಹ್ಯಾರೀಸ್ ಬೆಂಬಲಿಗರು ಇದು ಕಿವಿಯೋಲೆಯೇ ಹೊರತು, ಇಯರ್ ಫೋನ್ ಅಲ್ಲ., ಇಯರ್ ಫೋನ್ ಗೂ ಕಿವಿಯಯೋಲೆಗೂ ವ್ಯತ್ಯಾಸ ಗೊತ್ತಾಗುವುದಿಲ್ಲವೇ ಎಂದು ತಿರುಗೇಟು ನೀಡಿದ್ದಾರೆ.
ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ತಮ್ಮ ರಿಪಬ್ಲಿಕನ್ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ನಡುವಿನ ಮುಖಾಮುಖಿ ಚರ್ಚೆಯಲ್ಲಿ ಇಯರ್ ಫೋನ್ ಧರಿಸಿದ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಇಬ್ಬರು ಅಭ್ಯರ್ಥಿಗಳ ಪರ-ವಿರೋಧ ಅಭಿಪ್ರಾಯ ಹೇಳಿಕೆ ಟೀಕೆ ಕೇಳಿಬಂದಿವೆ.
ಆದಾಗ್ಯೂ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹ್ಯಾರಿಸ್ ಕಿವಿಯೋಲೆಗಳಲ್ಲ, ಇಯರ್‍ಪೀಸ್ ಅನ್ನು ಧರಿಸಿದ್ದರು ಎಂದು ವಾದಿಸಿದರು. ಚರ್ಚೆಯ ಸಮಯದಲ್ಲಿ ಹ್ಯಾರಿಸ್ ಇಯರ್‌ಫೋನ್‌ಗಳನ್ನು ಸಹಾಯವಾಗಿ ಬಳಸುತ್ತಿದ್ದರು ಎಂದು ಬಳಕೆದಾರರು ದೂರಿದ್ದಾರೆ
ಕಮಲಾ ಹ್ಯಾರಿಸ್ ಆಡಿಯೋ ಕಿವಿಯೋಲೆಗಳನ್ನು ಹಾಕಿಕೊಂಡು ಫೀಡ್ ಲೈನ್ಸ್ ಹಾಕಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ, ಇದು ಚರ್ಚೆಯ ನಿಯಮಗಳಿಗೆ ವಿರುದ್ಧವಲ್ಲವೇ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನಿಸಿದ್ದಾರೆ.
ಡೋನಾಲ್ಡ್ “ಟ್ರಂಪ್ ವಿರುದ್ಧದ ಚರ್ಚೆಯಲ್ಲಿ ಕಮಲಾ ಅವರು ಸ್ವತಃ ಉತ್ತಮ ವಾಗ್ಮಿ ಮತ್ತು ಚರ್ಚಾಸ್ಪರ್ಧಿ ಎಂದು ನಾನು ಭಾವಿಸುತ್ತೇನೆ. ಆದರೆ ಅವರ ಕಿವಿಯೋಲೆಗಳು ನನಗೆ ತುಂಬಾ ಕುತೂಹಲ ಕೆರಳಿಸಿತು. ಬಹುಶಃ ಕೆಲವು ಟೆಕ್ ಲೇಖನಗಳಿಂದ ರೀತಿ ಕಾಣುವವರನ್ನು ನೆನಪಿಸಿಕೊಂಡಿದ್ದೇನೆ. ಕಿವಿಯೋಲೆಗಳಂತೆ ಕಾಣುವ ಇಯರ್‍ಫೆ?ನ್” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್‌ನಲ್ಲಿ ಬರೆದಿದ್ದಾರೆ.