೬೦೦ ಕೋಟಿ ಕ್ಲಬ್‌ನತ್ತ ಸ್ತ್ರೀ ೨
ಮುಂಬೈ,ಸೆ.೧೧-ಬಾಕ್ಸಾಫೀಸ್ ಹಿಟ್ ಆಗದೆ ಬರದಲ್ಲಿರುವ ಬಾಲಿವುಡ್ ಗೆ ರಿಲೀಫ್ ನೀಡಿರುವ ಚಿತ್ರ ಸ್ತ್ರೀ ೨ ಚಿತ್ರ ಭಾರತದಲ್ಲೇ ೫೦೦ ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಇದೀಗ ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಮತ್ತೊಂದು ಮೈಲಿಗಲ್ಲು ದಾಟಿದೆ.ಚಿತ್ರವು ಭಾರತದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಸ್ತ್ರೀ ೨ ಈಗಾಗಲೇ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಸೋಲಿಸಿದೆ ಮತ್ತು ಈಗ ೬೦೦ ಕೋಟಿ ಕ್ಲಬ್‌ನ ಭಾಗವಾಗಲು ಹತ್ತಿರವಾಗುತ್ತಿದೆ.
ಅಮರ್ ಕೌಶಿಕ್ ನಿರ್ದೇಶನದ ಸ್ತ್ರೀ ೨ ಚಿತ್ರ ಕೇವಲ ೨೭ ದಿನಗಳಲ್ಲಿ ಗದರ್ ಚಿತ್ರದಿಂದ ಹಿಡಿದು ಪಠಾಣ್ ಚಿತ್ರಗಳನ್ನು ಹಿಂದಿಕ್ಕಿದೆ.
ಸ್ಯಾಕ್‌ನಿಲ್ಕ್ ವರದಿಯ ಪ್ರಕಾರ, ಸ್ತ್ರೀ ಬಿಡುಗಡೆಯಾದ ೨೬ ನೇ ದಿನಕ್ಕೆ ೩.೨೫ ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಇದರೊಂದಿಗೆ ಸ್ತ್ರೀ ೨ ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರವನ್ನು ೨೬ ದಿನಗಳಲ್ಲಿ ಒಟ್ಟು ೫೫೩.೯೩ ಕೋಟಿ ಗಳಿಸುವ ಮೂಲಕ ಸೋಲಿಸಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಯಿತು. ಇದೀಗ ೨೭ನೇ ದಿನದ ಕಲೆಕ್ಷನ್ ನ ಆರಂಭಿಕ ಅಂಕಿಅಂಶಗಳೂ ಹೊರಬಿದ್ದಿವೆ.
ಇದು ೨೭ ನೇ ದಿನಕ್ಕೆ ೩ ಕೋಟಿ ರೂ. ಶ್ರದ್ಧಾ ಕಪೂರ್ ಅಭಿನಯದ ಈ ಕಾಮಿಡಿ ಚಿತ್ರ ಇದುವರೆಗೆ ಒಟ್ಟು ೫೫೬.೯೩ ಕೋಟಿ ಗಳಿಸಿದೆ, ಇದರೊಂದಿಗೆ ೬೦೦ ಕೋಟಿ ಕ್ಲಬ್ ಸೇರುವತ್ತ ಹೆಜ್ಜೆ ಹಾಕುತ್ತಿದೆ.
ಶ್ರೀ ೨ ಬಾಲಿವುಡ್‌ನ ಇತ್ತೀಚಿನ ಸೂಪರ್ ಹಿಟ್ ಆಗಿದೆ. ಸೂಪರ್‌ಸ್ಟಾರ್ ಚಿತ್ರಗಳು ಸಹ ಥಿಯೇಟರ್‌ಗಳಿಗೆ ಬರಲು ಹಿಂಜರಿಯುತ್ತಿರುವಾಗ ಚಿತ್ರವು ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ೨೦೧೮ ರಲ್ಲಿ ಬಿಡುಗಡೆಯಾದ ಸ್ತ್ರೀ ಎರಡನೇ ಭಾಗವನ್ನು ಅಮರ್ ಕೌಶಿಕ್ ನಿರ್ದೇಶಿಸಿದ್ದಾರೆ. ಹಾರರ್ ಕಾಮಿಡಿ ಚಿತ್ರದಲ್ಲಿ ರಾಜಕುಮಾರ್ ರಾವ್, ಶ್ರದ್ಧಾ ಕಪೂರ್ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.