ಲಾರಿ ಉರುಳಿ ೭ ಮಂದಿ ಸಾವು
ಪೂರ್ವ ಗೋದಾವರಿ, ಸೆ.೧೧-ವೇಗವಾಗಿ ಹೋಗುತ್ತಿದ್ದ ಲಾರಿ ಉರುಳಿಬಿದ್ದು,ಸ್ಥಳದಲ್ಲೇ ೭ ಕೂಲಿ ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ದೇವರಪಲ್ಲಿ ತಾಲೂಕಿನ ಚಿಲಕವಾರಿಪಾಕಲ ಬಳಿ ನಿನ್ನೆ ರಾತ್ರಿ ಸಂಭವಿಸಿದೆ.
ನೀಡದವೋಲು ಮಂಡಲದ ತಾಡಿಮಲ್ಲ ಗ್ರಾಮದ ತಮ್ಮಿ ರೆಡ್ಡಿ ಸತ್ಯನಾರಾಯಣ (೪೫), ದೇಶಭಟ್ಟುಲ ವೆಂಕಟರಾವ್ (೪೦), ಬೊಕ್ಕ ಪ್ರಸಾದ್ (೩೨), ಪೆನುಗುರ್ತಿ ಚಿನ್ನ ಮುಸಲಯ್ಯ (೩೫), ಕತ್ತಿವ ಕೃಷ್ಣ (೪೦), ಕತ್ತಿವ ಸತ್ತಿಪಂಡು (೪೦), ತಾಡಿ ಕೃಷ್ಣ (೪೫) ಮೃತಪಟ್ಟವರು.
ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗೋಡಂಬಿ ಲೋಡ್?? ತುಂಬಿಕೊಂಡು ತೆರಳುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ದುರಂತ ಸಂಭವಿಸಿದೆ.
ಆಂಧ್ರಪ್ರದೇಶದ ನರಸಾಪುರಂ ಮಂಡಲದ ಬೊರ್ರಂಪಾಲೆಂನಿಂದ ನಿಡದವೋಲು ಮಂಡಲದ ತಾಡಿಮಲ್ಲ ಕಡೆಗೆ ಲಾರಿ ಹೋಗುತ್ತಿದ್ದಾಗ ಚಿನ್ನಾಯಗುಡೆಂ ಉಪನಗರದಲ್ಲಿ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದೆ.
ಅಪಘಾತವಾದ ಲಾರಿಯಲ್ಲಿ ೧೦ ಮಂದಿ ಪ್ರಯಾಣಿಸುತ್ತಿದ್ದು, ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ದೇವರಪಲ್ಲಿ ಪೊಲೀಸರು ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊವ್ವೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.