ವೈದ್ಯರ ಪ್ರತಿಭಟನೆ: ರೋಗಿಗಳ ಪರದಾಟ
ಕೋಲ್ಕತ್ತಾ,ಸೆ.೧೧- ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ವಿರೋಧಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರ ಅನುಪಸ್ಥಿತಿಯಿಂದ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿದೆ.
ಇದರಿಂದ ಸೂಕ್ತ ಸಮುದಲ್ಲಿ ಚಿಕಿತ್ಸೆ ದೊರೆಯದೆ ರಾಜ್ಯಾದ್ಯಂತ ಹಲವು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ನಡುವೆ. ವೈದ್ಯೆಯ ಹತ್ಯೆಗೆ ನ್ಯಾಯ ಸಿಗುವ ತನಕ ಹೋರಾಟ ನಡೆಯಲಿದೆ ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.
ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಅನೇಕ ಸರ್ಕಾರಿ ಆಸ್ಪತ್ರೆಗಳಿಂದ ೧೧ ದಿನಗಳ ನಂತರ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವರದಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೋಲ್ಕತ್ತಾ, ವೈದ್ಯಾಧಿಕಾರಿಗಳ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ. ಅಪಘಾತಕ್ಕೀಡಾದ ಹೂಗ್ಲಿ ನಿವಾಸಿ ಸದಾನಂದ ಪಾಲ್ (೬೩) ಅವರು ಬರಾಸತ್‌ನ ಖಾಸಗಿ ಆಸ್ಪತ್ರೆಯಲ್ಲಿ ನರಶಸ್ತ್ರಚಿಕಿತ್ಸೆಗೆ ಒಳಗಾದ ಕೆಲವು ದಿನಗಳ ನಂತರ ಆಗಸ್ಟ್ ೨೯ ರಂದು ನಿಧನರಾಗಿದ್ದಾರೆ.
ವೈದ್ಯರ ಪ್ರತಿಭಟನೆಯಿಂದ ದಿನದಿಂದ ದಿನಕ್ಕೆ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ನೋವಿನ ಸಂಗತಿ. ಹರಿಪಾಲ್‌ನ ವ್ಯಕ್ತಿಯೊಬ್ಬರು ಚಿಕಿತ್ಸೆ ನಿರಾಕರಿಸಿದ ನಂತರ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.
ಕಿರಿಯ ವೈದ್ಯರ ಗೈರುಹಾಜರಿಯಿಂದ ಹಿರಿಯ ವೈದ್ಯರ ಮೇಲೆ ಒತ್ತಡ ಉಂಟುಮಾಡುತ್ತದೆ, ಎಲ್ಲರಿಗೂ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಆರಂಭದಲ್ಲಿ ರೋಗಿಗಳ ಸಂಖ್ಯೆ ಇಳಿಮುಖವಾಗಿದ್ದರೂ, ಪ್ರಸ್ತುತ ಸಂಖ್ಯೆ ಸಾಮಾನ್ಯವಾಗಿದೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೋಗಿಗಳು ಸಾರ್ವಕಾಲಿಕ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿ ವಿಭಾಗದಲ್ಲಿ ಹಿರಿಯ ವೈದ್ಯರ ರೋಸ್ಟರ್‌ಗಳನ್ನು ಮರುರೂಪಿಸಲಾಗಿದೆ.