ಮಾಲ್ಡೀವ್ಸ್ ಅಧ್ಯಕ್ಷ ಶೀಘ್ರ ಭಾರತಕ್ಕೆ ಭೇಟಿ
ನವದೆಹಲಿ,ಸೆ.೧೧- ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತವನ್ನು ಟೀಕಿಸಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಆದ ನಷ್ಟ ಸರಿದೂಗಿಸಿಕೊಳ್ಳಲು “ಅತಿ ಶೀಘ್ರದಲ್ಲಿ” ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.
೨೦೨೩ರ ನವೆಂಬರ್ ತಿಂಗಳಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊಹಮ್ಮದ್ ಮುಯಿಝು ಅವರ ಮೊದಲ ಅಧಿಕೃತ ಭಾರತ ಭೇಟಿಗಾಗಿ “ಕಾರ್ಯಸಾಧ್ಯ” ದಿನಾಂಕವನ್ನು ಅಂತಿಮಗೊಳಿಸಲು ಉಭಯ ಕಡೆಯವರು ನೋಡುತ್ತಿದ್ದಾರೆ ಎಂದು ಅಧ್ಯಕ್ಷರ ಕಚೇರಿ ಪ್ರಕಟಣೆ ತಿಳಿಸಿದೆ,
ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಇಬ್ಬರು ಕಿರಿಯ ಸಚಿವರು ಸರ್ಕಾರಕ್ಕೆ ರಾಜೀನಾಮೆ ನೀಡಿದ ದಿನದಲ್ಲಿ ಈ ಘೋಷಣೆ ಹೊರಬಿದ್ದಿದೆ.
ಈ ವರ್ಷದ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮೊಹಮ್ಮದ್ ಮುಯಿಝು ಅವರು ಪಾಲ್ಗೊಂಡಿದ್ದರು ಮತ್ತು ಕಳೆದ ತಿಂಗಳು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮಾಲೆಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಬಾಂಧವ್ಯಗಳ ಬಗ್ಗೆ ಚರ್ಚೆ ನಡೆಸಿದ್ದರು.
ಮಾಲ್ಡೀವ್ಸ್ ಚೀನಾ ಪರ ಪರಿಗಣಿಸಲಾಗಿದೆ, ದ್ವೀಪಸಮೂಹದ ದೇಶದಿಂದ ಭಾರತೀಯ ಸೇನಾ ಸಿಬ್ಬಂದಿಯನ್ನು ತಕ್ಷಣವೇ ಹಿಂತೆಗೆದುಕೊಳ್ಳಲು ಅಧ್ಯಕ್ಷರಾಗಿ ಮೊಹಮ್ಮದ್ ಮುಯಿಝು ಅವರು ಕಳೆದ ವರ್ಷ ತೆಗೆದುಕೊಂಡ ನಿರ್ಧಾರ, ಮಾಲ್ಡೀವ್ಸ್ ಸಂಬಂಧದ ಮೇಲೆ ತೀವ್ರ ಪರಿಣಾಮ ಬಿರಿತ್ತು.
ಭಾರತ ಮಿಲಿಟರಿ ಸಿಬ್ಬಂದಿಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ನಾಗರಿಕ ಉದ್ಯೋಗಿಗಳೊಂದಿಗೆ ಬದಲಾಯಿಸಿದಾಗಿನಿಂದ ಪರಿಸ್ಥಿತಿ ಸುಧಾರಿಸಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗಾಗಿ ಜನವರಿಯಲ್ಲಿ ಅಮಾನತುಗೊಂಡ ಇಬ್ಬರು ಕಿರಿಯ ಸಚಿವರು ಸರ್ಕಾರಕ್ಕೆ ರಾಜೀನಾಮೆ ನೀಡಿದ ದಿನದಂದು ಅಧ್ಯಕ್ಷರ ಕಚೇರಿಯ ಮುಖ್ಯ ವಕ್ತಾರರಾದ ಹೀನಾ ವಲೀದ್ ಅವರು ಮೊಹಮ್ಮದ್ ಮುಯಿಝು ಅವರ ಭೇಟಿ ಘೋಷಿಸಿದ್ದು ಇನ್ನೂ ಪ್ರವಾಸದ ನಿಖರವಾದ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ,