ಮಾಡೆಲ್ ವಾಕರ್ ಬ್ಲಾಂಕೊ ಜೊತೆಗೆ ಅನನ್ಯಾ ಡೇಟಿಂಗ್
ಮುಂಬೈ,ಸೆ.೧೧-ಅನನ್ಯಾ ಪಾಂಡೆ ಪ್ರೇಮ ಜೀವನ ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳಲ್ಲಿ ಚರ್ಚೆಯ ವಿಷಯವಾಗಿದೆ. ಆದಿತ್ಯ ರಾಯ್ ಕಪೂರ್ ಜೊತೆಗಿನ ರಹಸ್ಯ ಪ್ರಣಯದಿಂದ ಹಿಡಿದು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆಗಿನ ಸಂಪರ್ಕದವರೆಗೆ ಮಾಧ್ಯಮಗಳಲ್ಲಿ ಸುದ್ದಿಗಳಿವೆ.
ಇದೀಗ ಅನನ್ಯಾ ಪಾಂಡೆ ಡಬ್ಲ್ಯೂ ಇನಿಶಿಯಲ್ ಇರುವ ಪೆಂಡೆಂಟ್ ಧರಿಸಿದ್ದು, ಅಮೆರಿಕನ್ ಮಾಡೆಲ್ ವಾಕರ್ ಬ್ಲಾಂಕೊ ಅವರೊಂದಿಗಿನ ಸಂಬಂಧದ ಬಗ್ಗೆ ವದಂತಿಗಳನ್ನು ಹುಟ್ಟುಹಾಕಿದೆ.
ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ನಟಿ ಈಗ ಬ್ಲಾಂಕೊ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ.
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆ ಅನನ್ಯಾ ಪಾಂಡೆ ಹೆಸರು ಬಹಳ ದಿನಗಳಿಂದ ತಳುಕು ಹಾಕಿಕೊಂಡಿದೆ. ಆದಿತ್ಯ ರಾಯ್ ಕಪೂರ್ ಜೊತೆಗಿನ ಬ್ರೇಕಪ್ ನಂತರ ಅನನ್ಯಾ ಮತ್ತು ಬ್ಲಾಂಕೊ ಈ ವರ್ಷದ ಆರಂಭದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ .ಆದರೆ, ಇದೀಗ ನಟಿಯ ಲೇಟೆಸ್ಟ್ ಲುಕ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅನನ್ಯಾ ಅವರ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಅನನ್ಯಾ ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಸಮಯದಲ್ಲಿ ಅವಳು ಕ್ಯಾಶುಯಲ್ ಬಟ್ಟೆಗಳಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಳು. ಆದರೆ, ಎಲ್ಲರ ಗಮನ ಸೆಳೆದಿದ್ದು ಆಕೆಯ ವಿಶೇಷ ಹಾರ.
ಅನನ್ಯಾ ಕೊರಳಲ್ಲಿ ಪೆಂಡೆಂಟ್ ಹಾಕಿಕೊಂಡು ತನ್ನ ಅಫೇರ್ ಕುರಿತ ಊಹಾಪೋಹಗಳಿಗೆ ಇಂಬು ನೀಡಿದ್ದಾಳೆ.
ಅನನ್ಯಾ ತನ್ನ ಕೊರಳಲ್ಲಿ ಪೆಂಡೆಂಟ್ ಹೊಂದಿರುವ ಹೊಸ ಸರವನ್ನು ಧರಿಸಿ ತನ್ನ ಅಭಿಮಾನಿಗಳ ಮುಂದೆ ಬಂದಿದ್ದಾಳೆ. ಪೆಂಡೆಂಟ್‌ನಲ್ಲಿ ಎಡಬ್ಲ್ಯೂ ಎಂದು ಬರೆಯಲಾಗಿದೆ. ಪೆಂಡೆಂಟ್‌ನಲ್ಲಿನ ಮೊದಲ ಪದ ಎ ಎಂಬುದು ಅನನ್ಯಾ ಹೆಸರಿನ ಸಂಕೇತವಾಗಿದೆ. ಡಬ್ಲ್ಯೂ ಪದದ ಅರ್ಥ ಮಾಡಿಕೊಂಡ ಅಭಿಮಾನಿಗಳು ಆಕೆಯ ಹೊಸ ಗೆಳೆಯನ ಹೆಸರಿನ ಮೊದಲ ಅಕ್ಷರ ಎಂದು ಅಭಿಮಾನಿಗಳು ಊಹಾಪೋಹ ಮಾಡುತ್ತಿದ್ದಾರೆ.