ಭಾರತವನ್ನು ಆರ್ ಎಸ್ ಎಸ್ ಸರಿಯಾಗಿ ಅರ್ಥೈಸಿಲ್ಲ: ರಾಹುಲ್
ವರ್ಜಿನಿಯಾ,ಸೆ.೧೦- ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆ- ’ಆರೆಸ್‌ಎಸ್ ಭಾರತವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಭಾಷೆ, ಸಿದ್ದಾಂತದ ಅಡಿಯಲ್ಲಿ ಕೆಲವು ರಾಜ್ಯಗಳು ಇತರರಿಗಿಂತ ಕೀಳು ಎಂದು ಭಾವಿಸಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದಿಲ್ಲಿ ಆರೋಪಿಸಿದ್ದಾರೆ.
ಎಲ್ಲಾ ರಾಜ್ಯಕ್ಕೂ ತನ್ನದೇ ಆದ ಇತಿಹಾಸ, ಸಂಪ್ರದಾಯವಿದೆ…ಆರೆಸ್‌ಎಸ್ ಸಿದ್ಧಾಂತ ತಮಿಳು, ಮರಾಠಿ, ಬಂಗಾಳಿ, ಮಣಿಪುರಿ, ಇವು ಕೀಳು ಭಾಷೆಗಳು ಎಂದು ಬಿಂಬಿಸುವ ಪ್ರಯತ್ನ ಮಾಡಿದೆ.ಈ ಕಾರಣಕ್ಕೆ ಆರ್ ಎಸ್ ಎಸ್ ಇಡೀ ಭಾರತ ಸಂಪೂರ್ಣವಾಗಿ ಅರ್ಥವಾಗಿಲ್ಲ ಎಂದಿದ್ದಾರೆ
ಅಮೆರಿಕಾ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ವರ್ಜೀನಿಯಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು “ಕೆಲವು ರಾಜ್ಯಗಳನ್ನು ಇತರ ರಾಜ್ಯಗಳಿಗಿಂತ ಕೀಳು ಎಂದು ಆರೆಸ್‌ಎಸ್ ಬಿಂಬಿಸುತ್ತಿದೆ ಎಂದು ತಿಳಿಸಿದ್ದಾರೆ.
ಕೆಲವು ಭಾಷೆಗಳು ಇತರ ಭಾಷೆಗಳಿಗಿಂತ ಕೀಳು, ಕೆಲವು ಧರ್ಮಗಳು ಇತರ ಧರ್ಮಗಳಿಗಿಂತ ಕೀಳು, ಮತ್ತು ಕೆಲವು ಸಮುದಾಯಗಳು ಇತರ ಸಮುದಾಯಗಳಿಗಿಂತ ಕೀಳು ಎನ್ನುವ ಬೇಧ ಭಾವ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ
ಬಿಜೆಪಿಗೆ ಈ ದೇಶ ಎಲ್ಲರದ್ದು.. ಭಾರತ ಒಕ್ಕೂಟ ಎಂದು ಅರ್ಥವಾಗುತ್ತಿಲ್ಲ. ಸಂವಿಧಾನದಲ್ಲಿ ಸ್ಪಷ್ಟವಾಗಿ ಬರೆದಿದೆ. ದೇಶದ ಒಕ್ಕೂಟ ವ್ಯವಸ್ಥೆ ಎಂದು ಆದರೆ ಧರ್ಮದ ಆಧಾರದ ಮೇಲೆ ಭಾರತವನ್ನು ವಿಭಜಿಸುವ ಪ್ರಯತ್ನ ನಡೆದಿದೆ ಎಂದು ಅವರು ದೂರಿದ್ಧಾರೆ
ಭಾರತ ಒಕ್ಕೂಟಗಳ ರಾಜ್ಯವಾಗಿದೆ, ಇತಿಹಾಸಗಳು, ಸಂಪ್ರದಾಯ ಸಂಗೀತ ಮತ್ತು ನೃv ಒಂದೆ ಇದು ಒಕ್ಕೂಟವಲ್ಲ, ವಿಭಿನ್ನವಾಗಿದೆ ಎಂದು ತಿಳಿಸಿದ್ದಾರೆ
“ಭಾರತದಲ್ಲಿ ನ್ಯಾಯಯುತವಾದ ಸ್ಥಳವಾದಾಗ ಮೀಸಲಾತಿಯನ್ನು ರದ್ದುಗೊಳಿಸುವ ಬಗ್ಗೆ ಯೋಚಿಸುತ್ತೇವೆ.ಆದರೆ ಭಾರತ ಈಗ ಸೂಕ್ತ ಮತ್ತು ನ್ಯಾಯಯುತ ಸಮಯ ಅಲ್ಲ ಎಂದಿದ್ದಾರೆ
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೀಸಲಾತಿ ಮತ್ತು ಎಷ್ಟು ಕಾಲ ಮುಂದುವರಿಯುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರ ಈ ವಿಷಯ ತಿಳಿಸಿದ್ದು ‘ಮೀಸಲಾತಿ ಒಂದೇ ಸಾಧನವಲ್ಲ. ಇತರ ಉಪಕರಣಗಳಿವೆ, ”ಎಂದು ಅವರು ಹೇಳಿದರು.
“ಭಾರತದ ಸಂವಿಧಾನವನ್ನು ರಕ್ಷಿಸಬೇಕು ಎಂದು ನಾವು ಒಪ್ಪುತ್ತೇವೆ. ನಮ್ಮಲ್ಲಿ ಹೆಚ್ಚಿನವರು ಜಾತಿ ಗಣತಿಯ ಕಲ್ಪನೆಯನ್ನು ಒಪ್ಪುತ್ತಾರೆ. ಹೀಗಾಗಿಯೇ ಜಾತಿ ಗಣತಿ ನಡೆಯಬೇಕು ಎನ್ನವುದುವು ಕಾಂಗ್ರೆಸ್ ಉದ್ದೇಶ ಎಂದಿದ್ಧಾರೆ