ಯುಎಸ್ ಓಪನ್ ಇತಿಹಾಸ ಸೃಷ್ಟಿಸಿದ ಪ್ರೇಕ್ಷಕರು
ನ್ಯೂಯಾರ್ಕ್,ಸೆ.೧೦-ಈ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ೨೦೨೪ ರಲ್ಲಿ ಪ್ರೇಕ್ಷಕರು ಇತಿಹಾಸವನ್ನು ಸೃಷ್ಟಿಸಿದ್ದಾರೆ.
೨೦೨೪ ರ ಯುಎಸ್ ಓಪನ್ ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಲ್ಲಿ ಜೀನ್ ಕಿಂಗ್ ನ್ಯಾಷನಲ್ ಟೆನಿಸ್ ಸೆಂಟರ್‌ನಲ್ಲಿ ಒಂದು ಮಿಲಿಯನ್
ದಾಖಲೆ ಟೆನಿಸ್ ಪ್ರಿಯ ವೀಕ್ಷಕರ ಆಗಮನದೊಂದಿಗೆ ಪ್ರೇಕ್ಷಕರಿಂದ ಕ್ರೀಡಾಂಗಣ ತುಂಬಿ ತುಳುಕಿದೆ . ಜೊತೆಗೆ ಪ್ರವಾಹದಂತೆ ಹಣ ಕೂಡ ಹರಿದುಬಂದಿದೆ. ಅಭಿಮಾನಿಗಳಿಂದ, ಭರ್ಜರಿ ಹಣ ಸಂಗ್ರಹವಾಗಿದೆ.
ಇದು ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಧಿಕ ಪ್ರೇಕ್ಷಕರ ಹಾಜರಾತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವರದಿ ಪ್ರಕಾರ, ಪುರುಷ ಹಾಗೂ ಮಹಿಳಾ ಎರಡೂ ಸಿಂಗಲ್ಸ್ ಫೈನಲ್‌ಗಳಲ್ಲಿ ಅಮೇರಿಕನ್ ಆಟಗಾರರು ಫೈನಲ್ ತಲುಪಿದ್ದು ಕಳೆದ ವರ್ಷದ ದಾಖಲೆಯ ೮೩೨,೬೪೦ ಅಭಿಮಾನಿಗಳ ಹಾಜರಾತಿಯಲ್ಲಿ ೮ ಶೇಕಡಾ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ವಿಶ್ವ ನಂ.೨ ಸಬಲೆಂಕಾ ಶನಿವಾರ ರಾತ್ರಿ ನಡೆದ ಪ್ರಶಸ್ತಿ ಕಾದಾಟದಲ್ಲಿ ಅಮೇರಿಕಾದ, ವಿಶ್ವ ನಂ. ೬ ಜೆಸ್ಸಿಕಾ ಪೆಗುಲಾ ಎದುರು ೭-೫, ೭-೫ ನೇರ ಸೆಟ್‌ಗಳ ಹಣಾಹಣಿಯಲ್ಲಿ ಗೆದ್ದಿದ್ದಾರೆ.
ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಟೂರ್ನಿಯ ಫೈನಲ್ ಆಡಿದ ಜೆಸ್ಸಿಕಾ ಪೆಗುಲಾ ರನ್ನರ್ ಅಪ್ ಟ್ರೋಫಿಯೊಂದಿಗೆ ? ೧೫.೧೧ ಕೋಟಿ ಬಹುಮಾನ ಮೊತ್ತ ಪಡೆದಿದ್ದಾರೆ. ಚಾಂಪಿಯನ್ ಅರಿನಾ ಸಬಲೆಂಕಾ ಪ್ರಶಸ್ತಿ ಜಯದೊಂದಿಗೆ ೩೦.೧೯ ಕೋಟಿ ರೂ. ಬಹುಮಾನ ಗೆದ್ದು ಬಿಗಿದ್ದಾರೆ.
ಪುರುಷರ ಫೈನಲ್ ಪಂದ್ಯದಲ್ಲಿ ಅವರು ಅಮೆರಿಕದ ೨೬ ವರ್ಷದ ಟೇಲರ್ ಫ್ರಿಟ್ಜ್ ಅವರನ್ನು ಇಟಾಲಿಯನ್ ಟೆನಿಸ್ ತಾರೆ ಜಾನಿಕ್ ಸಿನ್ನರ್ ೬-೩, ೬-೪, ೭-೫ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.