ಉದ್ಯೋಗ ಹಗರಣ: ಟಿಎಂಸಿ ಸಂಸದನ ಅರ್ಜಿ ವಜಾ
ನವದೆಹಲಿ,ಸೆ-೯- ಪಶ್ಚಿಮಬಂಗಾಳದ ಶಾಲಾ ಉದ್ಯೋಗ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಸಮನ್ಸ್ ಪ್ರಶ್ನಿಸಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ಕೋಲ್ಕತ್ತಾವನ್ನು ಸಾಮಾನ್ಯ ವಾಸಸ್ಥಳ ಎಂದು ಹೇಳಿಕೊಂಡ ಗಂಡ-ಹೆಂಡತಿ ನವದೆಹಲಿಯಲ್ಲಿ ಹಾಜರಾತಿ ಅಗತ್ಯವಿರುವುದರಿಂದ ಜಾರಿ ನಿರ್ದೇಶನಾಲಯದ ಸಮನ್ಸ್ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು
ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠ ತೀರ್ಪು ಪ್ರಕಟಿಸಿದೆ. ಪೀಠ ಆಗಸ್ಟ್ ೧೩ರಂದು ತೀರ್ಪನ್ನು ಕಾಯ್ದಿರಿಸಿತ್ತು.
೧೯೭೩ರ ಅಪರಾಧ ಪ್ರಕ್ರಿಯಾ ಸಂಹಿತೆಯ ನಿಬಂಧನೆಗಳು ಸಮನ್ಸ್‌ಗೆ ಸಂಬಂಧಿಸಿದಂತೆ ಅನ್ವಯವಾಗಬೇಕು ಎಂದು ಅರ್ಜಿದಾರರು ವಾದಿಸಿದರು, ೨೦೦೨ ರ ಮನಿ ಲಾಂಡರಿಂಗ್ ತಡೆ ಕಾಯ್ದೆಯು ನಿರ್ದಿಷ್ಟವಾಗಿ ಯಾವುದೇ ಕಾರ್ಯವಿಧಾನ ಒದಗಿಸುವುದಿಲ್ಲ ಎಂದು ಹೇಳಿದೆ
ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ನ ಪ್ರಕಾರ, ಕೋಲ್ಕತ್ತಾದಲ್ಲಿ ಅಪರಾಧ ನಡೆದಿದೆ ಎಂದು ಹೇಳಲಾದ ಸ್ಥಳದಲ್ಲಿ ಮಾತ್ರ ಹಾಜರಾಗುವಂತೆ ಕೇಳಬಹುದು ಮತ್ತು ನವದೆಹಲಿಯಲ್ಲಿ ಅಲ್ಲ ಎಂದು ನ್ಯಾಯಪೀಠ ಹೇಳಿದೆ.
ಸೆಕ್ಷನ್ ೫೦ರ ಅಕ್ರಮ ಹಣ ಲೇವಾದೇವಿ ಕಾಯ್ದೆಯ ಸೆಕ್ಷನ್ ೧೬೦ ಭಾರತೀಯ ಅಪರಾಧ ದಂಡಸಂಹಿತೆಗೆ ಪೂರಕವಾಗಿಲ್ಲ ಮತ್ತು ಅಕ್ರಮ ಹಣ ಲೇವಾದೇವಿ ಕಾಯ್ದೆಯ ಯ ನಿಬಂಧನೆಗಳು ಚಾಲ್ತಿಯಲ್ಲಿರುತ್ತವೆ ಎಂದು ಜಾರಿ ನಿರ್ದೇಶನಾಲಯ ವಾದ ಮಂಡಿಸಿತ್ತು
ಅಭಿಷೇಕ್ ಬ್ಯಾನರ್ಜಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರೆ, ರುಜಿರಾ ಬ್ಯಾನರ್ಜಿ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಗೋಪಾಲ್ ಶಂಕರನಾರಾಯಣನ್ ವಾದ ಮಂಡಿಸಿದ್ದರು.
ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಮತ್ತು ಅಡ್ವೊಕೇಟ್ ಜೊಹೆಬ್ ಹೊಸೈನ್ ಅವರು ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು