22,000 ಗಾಜಿನ ಬಳೆಗಳನ್ನು ಬಳಸಿ ೧೫ ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಮಯೂರ್‌ಭಂಜ್,ಸೆ.೮-ದೇಶಾದ್ಯಂತ ಗಣೇಶ ಚತುರ್ಥಿಯನ್ನು ಅತ್ಯಂತ ಉತ್ಸಾಹ, ಸಂಭ್ರಮ ಸಡಗರದಿಂದ ಆಚರಿಸುತ್ತಿದೆ. ವಿಘ್ನ ವಿನಾಯಕ ನಾನಾ ರೂಪದ ಪ್ರತಿಮೆಗಳು ಪ್ರತಿಷ್ಠಾಪಿಸಲ್ಪಟ್ಟಿವೆ .
ಒಡಿಶಾದ ಬರಿಪಾಡಾದಲ್ಲಿ ಫ್ರೆಂಡ್ಸ್ ಯೂನಿಯನ್ ಆರ್ಗನೈಸೇಶನ್ ಎಂದು ಕರೆಯಲ್ಪಡುವ ಯುವ ಸಂಘಟನೆಯೊಂದು ೨೫,೦೦೦ ಗಾಜಿನ ಬಳೆಗಳನ್ನು ಬಳಸಿ ೧೫ ಅಡಿ ಎತ್ತರದ ಗಣೇಶ ಮೂರ್ತಿ ತಯಾರಿಸಿದೆ.
ಈ ವಿಶಿಷ್ಟ ಮೂರ್ತಿಯ ಅಲಂಕಾರ ಮತ್ತು ರಚನೆಗೆ ಒಟ್ಟು ೨೨ ರಿಂದ ೨೫ ಲಕ್ಷಕ್ಕೂ ಹೆಚ್ಚು ಹಣ ವಿನಿಯೋಗಿಸಲಾಗಿದೆ.
ಮಹಾರಾಷ್ಟ್ರದ ಸಂಪ್ರದಾಯದ ಪ್ರಕಾರ ಗಣೇಶ ಪೂಜೆಯನ್ನು ೫ ದಿನಗಳ ಕಾಲ ಆಚರಿಸಲಾಗುತ್ತದೆ. ಹಬ್ಬವು ದಿನಗಳ ಕಾಲ ಬುಡಕಟ್ಟು ಸಾಂಪ್ರದಾಯಿಕ ಹಾಡುಗಳು, ನೃತ್ಯಗಳು, ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆ ಇರುತ್ತವೆ. ೨೫೦೦೦ (ಇಪ್ಪತ್ತೈದು ಸಾವಿರ) ಗಾಜಿನ ಬಳೆಗಳಿಂದ ತಯಾರಿಸಿದ ಅತ್ಯಂತ ವಿಶಿಷ್ಟವಾದ ೧೫ ಅಡಿ ಗಣೇಶ ಮೂರ್ತಿಗೆ ೫ ದಿನಗಳ ಕಾಲ ಪ್ರಸಾದ ವಿತರಣೆ ನಡೆಯುತ್ತಿದೆ ಬೇರೆ ರಾಜ್ಯಗಳಿಂದ ಭಕ್ತರು ಈ ಗಣಪತಿ ವೀಕ್ಷಿಸಿಸಲು ಆಗಮಿಸಿದ್ದಾರೆ.
ಫ್ರೆಂಡ್ಸ್ ಯೂನಿಯನ್ ಸದಸ್ಯರಲ್ಲೊಬ್ಬರಾದ ದೇಬಶಿಶ್ ಲಾಲ್ ಮಾತನಾಡಿ, ಇಲ್ಲಿ ಮುಸ್ಲಿಂ ಬಾಂಧವರು ಸೇರಿದಂತೆ ಎಲ್ಲ ಸಮುದಾಯದವರೊಂದಿಗೆ ಗಣೇಶ ಚತುರ್ಥಿ ಆಚರಿಸಲಾಗುತ್ತದೆ.ನಮ್ಮ ಸಂಘಟನೆಯು ಏಕತೆ ಮತ್ತು ಕೋಮು ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಹೇಳಿದ್ದಾರೆ.