ಇಂದು ಪಾರಾಲಿಂಪಿಕ್ಸ್‌ಗೆ ಅದ್ಧೂರಿ ತೆರೆ
ಪ್ಯಾರಿಸ್.ಸೆ.೮- ಕಳೆದ ೧೧ ದಿನಗಳಿಂದ ಕ್ರೀಡಾ ಜಗತ್ತನ್ನು ಮನರಂಜಿಸಿದ ಪ್ಯಾರಾಲಿಂಪಿಕ್ಸ್‌ಗೆ ಇಂದು ಅದ್ಧೂರಿ ತೆರೆ ಕಾಣಲಿದೆ.
ಪ್ಯಾರಾಲಿಂಪಿಕ್ಸ್‌ಗೆ ನೃತ್ಯ, ಸಂಗೀತ ಮತ್ತು ಗಣ್ಯರ ಮಾತುಗಳ ಮೂಲಕ ವರ್ಣರಂಜಿತ ತೆರೆಎಳೆಯಲು ಕ್ರೀಡಾ ಆಯೋಜಕರು ಸಜ್ಜಾಗಿದ್ದಾರೆ. ಇಂದು ರಾತ್ರಿ ೧೧.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಧ್ವಜಧಾರಿಯಾಗಿ ಹರ್ವಿಂದರ್ ಸಿಂಗ್ ಮತ್ತು ಪ್ರೀತಿ ಪಾಲ್ ಪಥಸಂಚಲನದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಪ್ಯಾರಾಲಿಂಪಿಕ್ಸ್ ಆ.೧೧ರಂದು ಮುಕ್ತಾಯಗೊಂಡು ಅದ್ಧೂರಿಯಾಗಿ ತೆರೆ ಕಂಡಿತ್ತು.
ಇದೀಗ ಪ್ಯಾರಾಲಿಂಪಿಕ್ಸ್ ಕೂಡ ತೆರೆ ಕಾಣುತ್ತಿದೆ.
ಈ ಬಾರಿಯ ಪ್ಯಾರಾಲಿಂಪಿಕ್ಸ್ ಹನ್ನೊಂದು ದಿನಗಳ ಕಾಲ ಕ್ರೀಡಾಸಂಭ್ರಮಕ್ಕೆ ಸಾಕ್ಷಿಯಾಗಿತ್ತು. ಪ್ಯಾರಾ ಅಥ್ಲೀಟ್‌ಗಳು ತಾವು ಯಾರಿಗೂ ಕಡಿಮೆಯಿಲ್ಲ ಅನ್ನೋದನ್ನಸಾಬೀತುಪಡಿಸಿದರು. ಪ್ಯಾರಾ ಅಥ್ಲೀಟ್‌ಗಳು ದೈಹಿಕ ಅಸಮರ್ಥನೆಯನ್ನು ಬದಿಗಿರಿಸಿ ಬದ್ಧತೆ ಮತ್ತು ಕ್ರೀಡಾಸ್ಪೂರ್ತಿ ಮೆರೆದರು. ಈ ಬಾರಿಯ ಪ್ಯಾರಾಲಿಂಪಿಕ್ಸ್ ಹಲವಾರು ದಾಖಲೆಗಳನ್ನು ಮುರಿದು ಹೊಸ ಮುನ್ನುಡಿ ಬರೆಯಿತು.
ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಅತಿ ಹೆಚ್ಚು ಪದಕಗಳನ್ನು ಗೆದ್ದು ಸಂಭ್ರಮಿಸಿದೆ. ಭಾರತ ಕ್ರೀಡಾಕೂಟದಲ್ಲಿ ೭ ಚಿನ್ನ, ೯ ಬೆಳ್ಳಿ ಮತ್ತು ೧೩ ಕಂಚು ಗೆದ್ದಿದು ಒಟ್ಟು ೨೯ ಪದಕಗಳನ್ನು ಗೆದ್ದುಕೊಂಡಿದೆ. ಆರ್ಚರ್ ಶೀತಲ್ ದೇವಿ, ಸಮಿತ್ ಅಂತಿಲ್ ಮತ್ತು ಶೂಟರ್ ಅವನಿ ಲೇಖಾರ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ.