ಕಟ್ಟಡ ಕುಸಿದು 8 ಮಂದಿ ಸಾವು
ಲಕ್ನೋ,ಸೆ.೮- ಲಕ್ನೋದ ಟ್ರಾನ್ಸ್‌ಪೊರ್ಟ್ ನಗರ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಜೊತೆಗೆ ೨೮ ಮಂದಿ ಗಾಯಗೊಂಡಿದ್ದು ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಎನ್‌ಡಿಆರೆಫ್‌ನ ನಾಲ್ಕು ತಂಡಗಳು, ಎಸ್‌ಡಿಆರೆಫ್‌ನ ಆರು ತಂಡಗಳು, ಅಗ್ನಿಶಾಮಕ ಇಲಾಖೆಯ ಐದು ತಂಡಗಳು ಮತ್ತು ಪೊಲೀಸರು ರಕ್ಷಣಾ ಕಾರ್ಯವನ್ನು ನಡೆಸಿದ್ದು ಸಿಕ್ಕಿಬಿದ್ದಿರುವ ಜನರಿಗಾಗಿ ರಕ್ಷಣಾ ಕಾರ್ಯಕರ್ತರು ಡ್ರೋನ್‌ಗಳನ್ನು ಬಳಳಲಾಗಿದೆ.
ಹೆಚ್ಚಿನ ಗಾಯಾಳುಗಳನ್ನು ಮೊದಲು ಹತ್ತಿರದ ಲೋಕ ಬಂಧು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೂರು ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಮಂದಿಯಲ್ಲಿ ಹಲವರು ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ, ಅಲ್ಲಿ ಮೂವರು ಆಗಮನದ ನಂತರ ಸತ್ತರು ಎಂದು ಘೋಷಿಸಲಾಯಿತು.
ರಾತ್ರಿ ೧೧ ಗಂಟೆಯ ನಂತರ ಇನ್ನೂ ಮೂರು ಮೃತದೇಹಗಳನ್ನು ಕಟ್ಟಡದ ಅವಶೇಷಗಳಿಂದ ಹೊರತೆಗೆಯಲಾಯಿತು. ಗಾಯಗೊಂಡವರಲ್ಲಿ ಆರು ಮಂದಿ ಚಿಂತಾಜನಕವಾಗಿದ್ದು, ಮೂವರು ಡಿಸ್ಚಾರ್ಜ್ ಆಗಿದ್ದಾರೆ. ಉಳಿದ ೧೯ ಸ್ಥಿರವಾಗಿದೆ ಎನ್ನಲಾಗಿದೆ
ಮೃತರನ್ನು ಪಂಕಜ್ ತಿವಾರಿ, ಧೀರಜ್ ಗುಪ್ತಾ, ಅರುಣ್ ಸೋಂಕರ್, ರಾಜ್ ಕಿಶೋರ್ ಮತ್ತು ಜಸ್ಮೀತ್ ಸಹಾನಿ ಎಂದು ಗುರುತಿಸಲಾಗಿದ್ದು, ಈತ ಕಟ್ಟಡದ ಮಾಲೀಕನ ಮಗ ಎನ್ನಲಾಗಿದೆ. ಕಟ್ಟಡದ ನಕ್ಷೆಯನ್ನು ಲಕ್ನೋ ಅಭಿವೃದ್ಧಿ ಪ್ರಾಧಿಕಾರ ಅನುಮೋದಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಲು ಮತ್ತು ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.