ಇತರೆ ಪಕ್ಷದೊಂದಿಗೆ ವಿಲೀನ ಬಿಜೆಪಿ ಅಗತ್ಯವಲ್ಲ
ಬಾಗಲಕೋಟೆ,ಸೆ.೮- ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷ ಬಿಜೆಪಿ ಜೊತೆ ವಿಲೀನವಾಗುವುದಿಲ್ಲ, ಅದರ ಅಗತ್ಯವೂ ಬಿಜೆಪಿಗೆ ಇಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಇಂದಿಲ್ಲಿ ಹೇಳಿದ್ದಾರೆ.
ಕೇಂದ್ರ ಸಚಿವ ಎಚ್,ಡಿ ಕುಮಾರ ಸ್ವಾಮಿ ಪ್ರಾಬಲ್ಯ ರಾಜ್ಯದಲ್ಲಿ ಹೆಚ್ಚುತ್ತಿದೆ. ಜೆಡಿಎಸ್ , ಬಿಜೆಪಿ ಜೊತೆ ವಿಲೀನವಾಗುತ್ತದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಹಿಂದೂ ಸಂಸ್ಕ್ರತಿಯನ್ನ ಉಳಿಸುವ ಪಕ್ಷ ಬಿಜೆಪಿ ಒಂದೇ, ಹಾಗಾಗಿ ಯಾವುದೇ ಪಕ್ಷದ ಜೊತೆಗೆ ಬಿಜೆಪಿ ವಿಲೀನ ಆಗುವುದಿಲ್ಲ ಎಂದಿದ್ದಾರೆ
ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರಲು ಸಹಕಾರಿಯಾಗಿದೆ.
ಕುಮಾರಸ್ವಾಮಿ ಅಥವಾ ಇನ್ಯಾರೋ ಪ್ರಯತ್ನದಿಂದ ಅಧಿಕಾರ ಹಿಡಿದಿಲ್ಲ ಎಂದು ತಿಳಿಸಿದ್ದಾರೆ
ದೇಶಾದ್ಯಂತ ಬಿಜೆಪಿ ಕಟ್ಟಿ ಬೆಳೆಸಲು ಅನೇಕ ವರ್ಷಗಳಿಂದ ಕಾರ್ಯಕರ್ತರು ರಕ್ತ ಬೆವರು ರೂಪದಲ್ಲಿ ರಕ್ತರ ಸುರಿಸಿದ ರಾಷ್ಟ್ರ ಭಕ್ತರು ಈ ಪಕ್ಷವನ್ನ ಕಟ್ಟಿದ್ದಾರೆ .ಧರ್ಮ ನಿಷ್ಠರು ಈ ಪಕ್ಷವನ್ನ ಕಟ್ಟಿದ್ದಾರೆ ಎಂದಿದ್ದಾರೆ
ಮತ್ತೆ ಯಡಿಯೂರಪ್ಪ ವಿರುದ್ದ ವಾಗ್ದಾಳಿ
ಕೋಟ್ಯಂತರ ಜನರು ಕಟ್ಟಿರುವ ಪಕ್ಷ ತಾತ್ಕಾಲಿಕವಾಗಿ ಕೆಲವು ಕುಟುಂಬದ ಕೈಗೆ ಸಿಕ್ಕಿ ನರಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿವೈ ಯಡಿಯೂರಪ್ಪ ವಿರುದ್ದ ನೇರ ವಾಗ್ದಾಳಿ ನಡೆಸಿದ್ದಾರೆ
ಈ ದೇಶಕ್ಕೆ ಒಂದೇ ಆಶಾ ಕಿರಣ ಬಿಜೆಪಿ, ಯಾವುದೇ ಪಕ್ಷದ ಜೊತೆಗೆ ವಿಲೀನ ಆಗುವ ಅಗತ್ಯ ಮತ್ತು ಅನಿವಾರ್ಯತೆ ಇಲ್ಲ ಎಂದು ತಿಳಿಸಿದ್ದಾರೆ
ರಾಜ್ಯದಲ್ಲಿ ಕೀಳುಮಟ್ಟದ ರಾಜಕಾರಣ
ದೇಶದ ಇತಿಹಾಸದಲ್ಲಿ ಕರ್ನಾಟಕದ ಈಗಿನ ರಾಜಕಾರಣ ಕೀಳುಮಟ್ಟಕ್ಕೆ ಇಳಿದಿದೆ, ಇದು ಬೇಸರದ ಸಂಗತಿ ಎಂದು ಈಶ್ಚರಪ್ಪ ಹೇಳಿದ್ದಾರೆ
ಆಡಳಿತ ಪಕ್ಷದ ಭ್ರಷ್ಟಾಚಾರ ಬಗ್ಗೆ ವಿರೋಧ ಪಕ್ಷ ಆರೋಪ ಮಾಡೋದು ತಪ್ಪಲ್ಲ. ಆದರೆ ವಿರೋಧ ಪಕ್ಷದ ಆರೋಪವನ್ನು ಆಡಳಿತ ಪಕ್ಷದವರು ತನಿಖೆ ಮಾಡಿಸುವ ಪದ್ದತಿ ಇದೆ. ತಪ್ಪಿತಸ್ಥರಾಗಿದ್ದರೆ ಶಿಕ್ಷೆ ಆಗಬೇಕು ಆಗುತ್ತದೆ ಎಂದಿದ್ದಾರೆ
ವಿರೋಧ ಪಕ್ಷಗಳು ವಿಶೇಷವಾಗಿ ಸಿದ್ದರಾಮಯ್ಯ ಸರ್ಕಾರದ ಮಂತ್ರಿಗಳು, ಸಿದ್ದರಾಮಯ್ಯ ಬಗ್ಗೆ ಆಪಾದನೆ ಮಾಡ್ತಿದಾರೆ ಈ ವೇಳೆ ಪಾದಯಾತ್ರೆ, ಧರಣಿಯಂತಹ ಹೋರಾಟಗಳು ನಡೆಯುತ್ತವೆ ತನಿಖೆ ಸಂದರ್ಭದಲ್ಲಿ ವೈಯಕ್ತಿಕ ಟೀಕೆ ಎಷ್ಟು ಕೀಳುಮಟ್ಟಕ್ಕೆ ಇಳಿದಿರುವುದು ಬೇಸರ ತಂದಿದೆ ಎಂದಿದ್ದಾರೆ