ಗಾಜಾ ಕದನ ವಿರಾಮಕ್ಕೆ ಅಮೆರಿಕ ಆಗ್ರಹ
ವಾಷಿಂಗ್ಟನ್, ಸೆ.೬- ಇಸ್ರೇಲ್ ಮತ್ತು ಹಮಾಸ್ ಎರಡೂ ಕಡೆಯಿಂದ ಗಾಜಾ ಕದನ ವಿರಾಮ ಅಂತಿಮಗೊಳಿಸುವಂತೆ ಅಮೆರಿಕಾ ಒತ್ತಾಯಿಸಿದೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರು ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಘೋಷಿಸುವ ಮೂಲಕ ಶಾಂತಿ ಕಾಪಾಡಲು ಒತ್ತು ನೀಡಬೇಕು ಎಂದು ಹೇಳಿದ್ದಾರೆ
ಒಪ್ಪಂದವನ್ನು ಅಂತಿಮಗೊಳಿಸಲು ಅಮೆರಿಕಾ ಎಲ್ಲಾ ರೀತಿಯ ಸಹಕಾರ ಮತ್ತು ಬೆಂಬಲ ನೀಡಲಿದೆ. ಮುಂದಿನ ದಿನಗಳಲ್ಲಿ ಮಧ್ಯವರ್ತಿಗಳಾದ ಈಜಿಪ್ಟ್ ಮತ್ತು ಕತಾರ್ ಮೂಲಕ ಹೆಚ್ಚಿನ ಆಲೋಚನೆಗಳನ್ನು ನೀಡಲಿದೆ ಎಂದು ತಿಳಿಸಿದ್ದಾರೆ
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಂದರ್ಶನದಲ್ಲಿ ೯೦ ಪ್ರತಿಶತದಷ್ಟು ಒಪ್ಪಂದ ಸಿದ್ಧವಾಗಿದೆ ಎಂಬ ಅಮೇರಿಕಾ ವಿದೇಶಾಂಗ ಕಾರ್ಯದಶಿ ಆಂಟೋನಿ ಬ್ಲಿಂಕನ್ ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ
ಹೈಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಆಂಟೋನಿ ಬ್ಲಿಂಕೆನ್ ಮೌಲ್ಯಮಾಪನವನ್ನು ಪುನರಾವರ್ತಿಸಿದ್ದು ಇದುವರೆಗೆ ತಾವು ಗಮನಿಸಿದ ಮಾಹಿತಿ ಮತ್ತು ಸಿಕ್ಕ ವಿಷಯದ ಹಿನ್ನೆಲೆಯಲ್ಲಿ ಈ ವಿಷಯ ದೃಢಪಡಿಸಿದ್ದೇನೆ ಎಂದರು.
ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಮಾಡಿಕೊಳ್ಳುವ ಮೂಲಕ ಎರಡೂ ಕಡೆಯ ಜನರು ಶಾಂತಿ ನೆಮ್ಮದಿಯ ವಾತಾರಣದಲ್ಲಿ ಬದುಕುವ ಅವಕಾಶ ಮಾಡಿಕೊಡಬೇಕಾಗಿದೆ ಎಂದಿದ್ದಾರೆ
ಹೀಗಾಗಲೇ ಹಲವು ತಿಂಗಳಿನಿಂದ ನಡೆಯುತ್ತಿರುವ ಹೋರಾಟದಲ್ಲಿ ಅಮಾಯಕ ನಾಗರಿಕರ ಹತ್ಯೆಯಾಗಿದೆ. ಇದರಿಂದ ಅನೇಕರು ಸಮಸ್ಯೆಗೆ ಸಿಲುಕಿದ್ದಾರೆ. ಗಾಜಾ ಮತ್ತು ಈಜಿಪ್ಟ್ ನಡುವಿನ ಗಡಿಯಲ್ಲಿ ಕೆಲವು ಇಸ್ರೇಲಿ ಪಡೆಗಳನ್ನು ತ್ಯಜಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮನಸ್ಸು ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ
ಅರಬ್ ರಾಷ್ಟ್ರಗಳೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಸಾಮಾನ್ಯಗೊಳಿಸಲು ಮೊದಲ ಆದ್ಯತೆ ನೀಡಿರುವ ಬೆಂಜಮಿನ್ ನೆತನ್ಯಾಹು ಅವರು ಇಸ್ಲಾಂ ಧರ್ಮದ ಎರಡು ಪವಿತ್ರ ದೇವಾಲಯಗಳ ರಕ್ಷಕ ಸೌದಿ ಅರೇಬಿಯಾದೊಂದಿಗೆ ಇನ್ನೂ ಐತಿಹಾಸಿಕ ಒಪ್ಪಂದವನ್ನು ತಲುಪಬಹುದು ಎಂದಿದ್ದಾರೆ