ಸಂದೀಪ್ ನಿವಸದ ಮೇಲೆ ಇಡಿ ದಾಳಿ
ಕೋಲ್ಕತ್ತಾ.ಸೆ.೬- ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಮತ್ತು ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಲ್ಲಿನ ಬೆಲ್ಘಟ್, ಹೌರಾ ಮತ್ತು ಸುಭಾಶ್‌ಗ್ರಾಂ ನಗರಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂದೀಪ್ ಘೋಷ್‌ಗೆ ಸೇರಿದ ಎನ್ನಲಾದ ಎರಡು ಮನೆಗಳ ಮೇಲೆ ಜಾರಿ ನಿದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದರು.
ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಅವ್ಯವಹರ ನಡೆದಿದೆ ಎಂದು ಇಲ್ಲಿನ ಮಾಜಿ ಅಧಿಕಾರಿಯೊಬ್ಬರು ಇಡಿಗೆ ದೂರು ನೀಡಿದ್ದರಿಂದ ದಾಳಿ ನಡೆದಿದೆ.
ಆರ್.ಜಿ.ಕರ್ ಕಾಲೇಜಿನ ಸಭಾಂಗಣದಲ್ಲಿ ಆ.೯ರಂದು ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಅತ್ಯಚಾರ ಮತ್ತು ಆಕೆಯ ಹತ್ಯೆ ಪ್ರಕರಣದ ತನಿಖಾ ಸಂದರ್ಭದಲ್ಲೆ ಕಾಲೇಜಿನಲ್ಲಿ ಅವ್ಯವವಹಾರ ನಡೆದಿರುವ ಆರೋಪವೂ ಕೇಳಿ ಬಂದಿತ್ತು.
ಇದೇ ವೇಳೆ ಕೋಲ್ಕತ್ತಾದ ಆರ್‍ಜಿಕರ್ ಆಸ್ಪತ್ರೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ವಿರೋಧಿಸಿ ನಡೆಸುತ್ತಿರುವ ಹೋರಾಟ ಐದನೇ ವಾರಕ್ಕೆ ಕಾಲಿಟ್ಟಿದ್ದು ದಿನದಿಂದ ದಿನಕ್ಕೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ.ಕಳೆದ ಐದು ವಾರಗಳಿಂದ ಪ್ರತಿಭಟನೆ ಮತ್ತು ಹೋರಾಟ ನಿರಂತರವಾಗಿ ನಡೆಯುತ್ತಿದ್ದ ತಪ್ಪಿತಸ್ಥರ ವಿರುದ್ದ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ಮತ್ತು ಹೋರಾಟ ನಡೆಯುತ್ತಿವೆ.
ರಾಷ್ಟ್ರೀಯ ಧ್ವಜದೊಂದಿಗೆ ಮತ್ತು ಪಕ್ಷದ ಬ್ಯಾನರ್‍ಗಳಿಲ್ಲದ ನಾಗರಿಕರು ವೈದ್ಯರು ನಡೆಸುತ್ತಿರುವ ಹೋರಾಟದಲ್ಲಿ ನಾಗರಿಕ-ಸಂಘಟಕರು ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಇಲ್ಲಿ ಬಳಕೆಯಲ್ಲಿವೆ.
ಸಾಮಾಜಿಕ ಮಾಧ್ಯಮದಲ್ಲಿ ಮೊದಲ ’ರಿಕ್ಲೈಮ್ ದಿ ನೈಟ್’ ಚಳವಳಿಯ ಕರೆ ನೀಡಿದ್ದು ಈ ರೀತಿಯ ಸ್ವಯಂಪ್ರೇರಿತ ಪ್ರತಿಭಟನೆಗಳನ್ನು ಎಂದಿಗೂ ನೋಡಿಲ್ಲ ಎಂದು ಲೇಖಕ ಶಿರ್ಷೇಂದು ಮುಖೋಪಾಧ್ಯಾಯ ಹೇಳಿದ್ದಾರೆ.
ಭವಾನಿಪುರದ ಗೃಹಿಣಿ ರಿಕ್ತಾ ಮಿಸ್ತ್ರಿ ನೀಡಿ ಈ ರೀತಿಯ ಪ್ರತಿಭಟನೆಯನ್ನು ಎಂದಿಗೂ ನೋಡಿರಲಿಲ್ಲ. ದಿನದಿಂದ ದಿನಕ್ಕೆ ಹೋರಾಟ ತೀವ್ರಗೊಳ್ಳುತ್ತಿದೆ ಹೆಚ್ಚಿನ ಜನರು ಭಾಗಿಯಾಗುತ್ತಿದ್ದಾರೆ ಎಂದಿದ್ಧಾರೆ
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು, ಅವುಗಳಲ್ಲಿ ಮುಖ್ಯವಾದ ವಾಟ್ಸಾಪ್ ಗುಂಪುಗಳಲ್ಲಿಯೂ ಕೂಡ ವ್ಯಾಪಕ ಸಂಚಲನ ಮೂಡಿಸಿದೆ.ಕೋಲ್ಕತ್ತಾದಂತಹ ನಗರದಲ್ಲಿ ಊಹೆಗೂ ಮೀರಿ ಹೋರಾಟಕ್ಕೆ ಬೆಂಬಲ ಸಿಗುತ್ತಿದೆ