ಮಗಳೇ ಎಂದು ಕರೆದು ಅತ್ಯಾಚಾರ ಎಸಗಿದ ನಿರ್ದೆಶಕ
ಹೈದರಾಬಾದ್,ಸೆ.೬-ಹೇಮಾ ಸಮಿತಿ ವರದಿ ನಂತರ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಆರೋಪಗಳು ಒಂದೊಂದಾಗಿ ಹೊರ ಬರುತ್ತಿವೆ.
ಈ ನಡುವೆ ಖ್ಯಾತ ನಟಿ ಸೌಮ್ಯಾ ತಮಿಳು ನಿರ್ದೇಶಕರೊಬ್ಬರ ವಿರುದ್ಧ ಮಾನಸಿಕ, ದೈಹಿಕ ಹಾಗೂ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಮಗಳೇ ಎಂದು ಬಾಯಿ ತುಂಬ ಕರೆಯುತ್ತಿದ್ದ ನಿರ್ದೇಶಕ ತನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹೇಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ತಮಿಳು ನಿರ್ದೇಶಕರೊಬ್ಬರು ತಮ್ಮ ಲೈಂಗಿಕ ಕೈಗೊಂಬೆಯಾಗಿ ನನ್ನನ್ನು ಬಳಸಿಕೊಂಡಿದ್ದಾರೆ ೧೮ ನೇ ವಯಸ್ಸಿನಲ್ಲಿ ಅವರು ಮಾಡಿದ ದೌರ್ಜನ್ಯ ಮತ್ತು ಕಿರುಕುಳದಿಂದ ನರಕವನ್ನು ಅನುಭವಿಸಿದ್ದೇನೆ ಎಂದು ಮಲಯಾಳಂ ನಟಿ ಸೌಮ್ಯಾ ಆರೋಪಿಸಿದ್ದಾರೆ. ಈ ಆರೋಪ ಮತ್ತೊಮ್ಮೆ ಮಲಯಾಳಂ ಚಿತ್ರರಂಗ ಮತ್ತು ತಮಿಳುನಾಡು ಚಿತ್ರರಂಗದಲ್ಲಿ ಕೋಲಾಹಲ ಉಂಟು ಮಾಡಿದೆ.
ಸೌಮ್ಯಾ ಮಲಯಾಳಂನ ನೀಲಕುರಕ್ಕನ್ ಅದ್ವಿತಂ ಚಿತ್ರಗಳಲ್ಲಿ ನಟಿಸಿದ್ದರು. ತಮಿಳಿನಲ್ಲಿ ಒಂದೆರೆಡು ಚಿತ್ರಗಳಲ್ಲಿ ಮಾತ್ರ ನಟಿಸಿ ನಂತರ ಚಿತ್ರರಂಗ ತೊರೆದಿದ್ದಾರೆ.
ಹೇಳಿಕೆಯೊಂದರಲ್ಲಿ ಸೌಮ್ಯಾ, ಆ ಸಮಯದಲ್ಲಿ ತನಗೆ ೧೮ ವರ್ಷ. ಆ ನಿರ್ದೇಶಕರು ನನ್ನನ್ನು ಅವರ ಮಗಳು ಎಂದು ಕರೆಯುತ್ತಿದ್ದರು ಒಂದು ದಿನ ನಿರ್ದೇಶಕರ ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ನನಗೆ ಮುತ್ತು ನೀಡಿದ್ದಾರೆ.
ಅವರು ನನ್ನೊಂದಿಗೆ ಮಗುವನ್ನು ಹೊಂದಲು ಬಯಸಿದ್ದರು ,ಒಂದು ವರ್ಷ ನಾನು ನಿರ್ದೇಶಕರ ಲೈಂಗಿಕ ಗುಲಾಮಳಾಗಿದ್ದೆ. ಭಯದಿಂದ ಇದನ್ನು ಹೇಳಲಾಗಲಿಲ್ಲ. ಈ ಅವಮಾನದ ಭಾವನೆಯಿಂದ ಹೊರಬರಲು ನನಗೆ ೩೦ ವರ್ಷಗಳು ಬೇಕಾಯಿತು. ಎನ್ನುವ ಆಘಾತಕಾರಿ ಮಾಹಿತಿ ನೀಡಿದ್ದಾರೆ. ಆದರೆ, ನಟಿ ನಿರ್ದೇಶಕರ ವಿವರಗಳನ್ನು ಬಹಿರಂಗಪಡಿಸಿಲ್ಲ. ಪೊಲೀಸರ ವಿಚಾರಣೆ ವೇಳೆ ಆತನ ಬಗ್ಗೆ ವಿವರ ನೀಡಿದ್ದೇನೆ ಎಂದು ತಿಳಿಸಿದ್ದಾರೆ.