ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಿತಿಮೀರಿದ ಬಿಡಾಡಿ ಗೂಳಿಗಳ ಉಪಟಳ
ಗದಗ, ಸೆ೫: ಬೆಟಗೇರಿಯ ಮಾರ್ಕಂಡೇಶ್ವರ ದೇವಸ್ಥಾನದ ಬಳಿ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ
ಅದೃಷ್ಟವಶಾತ್ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರು. ನರಸಾಪೂರ ಡಿಪ್ಲೊಮಾ ಕಾಲೇಜಿನಿಂದ ಬರ್ತಿದ್ದ ಮೂವರು ವಿದ್ಯಾರ್ಥಿನಿಯರು
ಏಕಾಏಕಿ ವಿದ್ಯಾರ್ಥಿನಿ ಮೇಲೆ ಎರಗಿದ ಬಿಡಾಡಿ ಗೂಳಿ. ಕೆಳಕ್ಕೆ ಬಿದ್ದು, ಗಾಯಗೊಂಡ ವಿದ್ಯಾರ್ಥಿನಿ.
ಗೂಳಿ ವಿದ್ಯಾರ್ಥಿನಿಗೆ ಗುದ್ದಿದ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆ. ಇನ್ನೂಂದೆಡೆ ಎರಡು ಗೂಳಿಗಳು ರಸ್ತೆ ಮಧ್ಯದಲ್ಲಿಯೇ ಪರಸ್ಪರ ಕಾದಾಟ.
ಕಾದಾಡುತ್ತ ಅಂಗಡಿಯೊಳಗೆ ನುಗ್ಗಿದ ಗೂಳಿ. ಅದೃಷ್ಟವಶಾತ್ ಮಗು ಎತ್ತಿಕೊಂಡು ನಿಂತಿದ್ದ ವ್ಯಕ್ತಿ ಹಾಗೂ ಮಗು ಬಚಾವ್.
ಮಗು ಎತ್ತಿಕೊಂಡು ಬೈಕ್ ಮೇಲೆ ಕೂತಿದ್ದ ವ್ಯಕ್ತಿ ಓಡಿ ಹೋಗಿ ಬಚಾವ್. ಮೈಜುಮ್ಮೆನಿಸುವಂತಿದೆ ಗೂಳಿ ಕಾದಾಟದ ವಿಡಿಯೋ
ನಗರಸಭೆಯಿಂದ ಕೇವಲ ಕಾಟಾಚಾರಕ್ಕೆ ಬಿಡಾಡಿ ದನಗಳ ಸ್ಥಳಾಂತರ ಕಾರ್ಯ. ಕೆಲ ದಿನಗಳ ಹಿಂದೆ ಓರ್ವ ವೃದ್ಧನ ಮೇಲೆ ಅಟ್ಯಾಕ್ ಮಾಡಿ ಕೊಂದ ಬಿಡಾಡಿ ದನ
ಈಗ ಮೊತ್ತೊಮ್ಮೆ ಸಾರ್ವಜನಿಕರ ಮೇಲೆ ಅಟ್ಯಾಕ್. ಅವಳಿ ನಗರದಲ್ಲಿರುವ ಎಲ್ಲಾ ಬೀದಿ ದನಗಳನ್ನೂ ಸ್ಥಳಾಂತರಿಸಬೇಕು ಎಂದು ಸ್ಥಳಿಯರು ಆಗ್ರಹ.