ಸೆ.29 ಬೆಂಗಳೂರಿನಲ್ಲಿ ಬಿಸಿಸಿಐ ವಿಶೇಷ ಸಭೆ
ಬೆಂಗಳೂರು: ಬಿಸಿಸಿಐನ 93ನೇ ವಾರ್ಷಿಕ ವಿಶೇಷ ಸಭೆ ಸೆ.29ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ವಿಶೇಷ ಸಭೆಯಲ್ಲಿ ಬಿಸಿಸಿಐನ ನೂತನ ಕಾರ್ಯದರ್ಶಿ ನೇಮಕ ನಡೆಯುವುದಿಲ್ಲ ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ವಿಶೇಷ ಸಭೆಯನ್ನು ಕರೆದು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಬಿಸಿಸಿಐನ ವಾರ್ಷಿಕ ವಿಶೇಷ ಸಭೆ ನಡೆಯುವುದರ ಜತೆಗೆ ನೂತನವಾಗಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಸದ್ಯ ಕಳೆದ 2 ದಶಕಗಳಿಂದ ಎನ್‍ಸಿಎ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ.
ಜಯ್ ಶಾ ಅವರು ಐಸಿಸಿ ಮುಖ್ಯಸ್ಥನಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವುದು ಕಡ್ಡಾಯವಾಗಿದೆ.
ಡಿ.1ರಂದು ಜಯ್ ಶಾ ಹೊಸ ಜವಾಬ್ದಾರಿ ಹೊರಲಿರುವ ಹಿನ್ನೆಲೆಯಲ್ಲಿ ಜಯ್‍ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರೆಯುವುದಿಲ್ಲ.
18 ಅಂಶಗಳು ವಿಶೇಷ ಸಭೆಯಲ್ಲಿ ಚರ್ಚೆ ನಡೆಯಲಿದೆ. ಐಸಿಸಿ ಸಭೆಗೆ ಬಿಸಿಸಿಐ ಪ್ರತಿನಿ ಮತ್ತು ಐಪಿಎಲ್ ಆಡಳಿತ ಮಂಡಳಿಗೆ ಪ್ರತಿನಿಗಳ ನೇಮಕ ಬಗ್ಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಚರ್ಚಿಸಲಿದ್ದಾರೆ.