ಶಿಕ್ಷಕರ ವರ್ಗಾವಣೆ, ಡಿಡಿಪಿಐಗೆ ಎಚ್ಚರಿಕೆ
ಯಾದಗಿರಿ,ಸೆ.೫-ಹಣ ಪಡೆದು ಶಿಕ್ಷಕರ ವರ್ಗಾವಣೆ ಮಾಡಬೇಡಿ ,ಕಾಲ ಬದಲಾಗಿದೆ ಮೊದಲಿನ ಹಾಗೆ ಇಲ್ಲ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಯಾದಗಿರಿ ಡಿಡಿಪಿಐ ಮಂಜುನಾಥ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತಡಿಬಿಡಿ ಗ್ರಾಮದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಲ್ಲರಿಗೂ ಶಿಕ್ಷಣ ತಲುಪಿಸುವ ಕೆಲಸ ಶಿಕ್ಷಣ ಇಲಾಖೆಯಿಂದ ಆಗಬೇಕು ಆದರೆ ಡಿಡಿಪಿಐ ಮಂಜುನಾಥ ನಿಮ್ಮ ಕೆಲಸ ನಾಮಕಾವಸ್ತೆ ಆಗಿದೆ ಅನುಷ್ಠಾನಗಳನ್ನು ಜಾರಿಗೆ ತರಲು ಯಾದಗಿರಿ ಶಿಕ್ಷಣ ಇಲಾಖೆ ವಿಫಲವಾಗಿದೆ.ಶಿಕ್ಷಣದಲ್ಲಿ ಹಿಂದುಳಿಯಲು ನೀವೆ ನೇರ ಕಾರಣ ಎಂದು ಆರೋಪಿಸಿದ್ದಾರೆ.
ಯಾದಗಿರಿಯಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣಾತಾ ಅಭಿಯಾನದಲ್ಲಿ ಪಾಲ್ಗೊಂಡು ಅಧಿಕಾರಿಗಳ ಕೆಲಸದಿಂದ ತೀವ್ರ ಅಸಮಾಧಾನಗೊಂಡ ಸಚಿವರು ಇಡೀ ಶಿಕ್ಷಣ ಇಲಾಖೆಯಿಂದ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.