ಸಿಬ್ಬಂದಿ ಮೇಲೆ ಹಲ್ಲೆ ಮಹಿಳೆ ಸೆರೆ
ಮುಂಬೈ,ಸೆ.೪-ವಿಮಾನ ನಿಲ್ದಾಣಗಳಲ್ಲಿನ ಅವ್ಯವಸ್ಥೆ ಈಗ ಭಾರತದ ಅನೇಕ ರಾಜ್ಯಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಅನೇಕ ಬಾರಿ ವಿಮಾನ ನಿಲ್ದಾಣದ ನೌಕರರು ಮತ್ತು ಪ್ರಯಾಣಿಕರ ನಡುವೆ ಜಗಳವಾಡಿದ ವರದಿಗಳು ಸಹ ಬಂದಿವೆ. ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಏರ್ ಇಂಡಿಯಾ ಎಕ್ಸ್ ಪ್ರೆಸ್ ಮಹಿಳಾ ಉದ್ಯೋಗಿ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ನಂತರ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎನ್ನಲಾಗಿದೆ.
ಮುಂಬೈ ವಿಮಾನ ನಿಲ್ದಾಣದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೌಂಟರ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಮಹಿಳಾ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ. ಡ್ಯೂಟಿ ಮ್ಯಾನೇಜರ್ ತಕ್ಷಣ ಸಿಐಎಸ್‌ಎಫ್‌ಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಅಗತ್ಯ ಕಾರ್ಯವಿಧಾನಗಳ ಪ್ರಕಾರ ಮಹಿಳಾ ಪ್ರಯಾಣಿಕರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ನಮ್ಮ ಅತಿಥಿಗಳು, ಉದ್ಯೋಗಿಗಳು ಮತ್ತು ನಮ್ಮ ಪಾಲುದಾರರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಧಕ್ಕೆ ತರುವ ಯಾವುದೇ ನಡುವಳಿಕೆ ಸಹಿಸುವುದಿಲ್ಲ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎಚ್ಚರಿಕೆ ನೀಡಿದೆ.