ಮೀನು ಸಾಕಾಣಿಕೆಯಿಂದಮೂತ್ರಪಿಂಡ ಕಾಯಿಲೆ
ನವದೆಹಲಿ,ಸೆ.೫-ನಾಗಾವ್ ಮತ್ತು ಮೋರಿಗಾಂವ್‌ನಲ್ಲಿ ಮೀನು ಸಾಕಾಣಿಕೆ ಮಾಡುತ್ತಿರುವ ಜನರಿಂದಲೇ ಮೂತ್ರಪಿಂಡ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ .ಈ ಎರಡು ಜಿಲ್ಲೆಗಳಲ್ಲಿ ಮೀನು ಕೃಷಿಯಲ್ಲಿ ಯೂರಿಯಾವನ್ನು ಹೆಚ್ಚು ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ .ನಾಗಾವ್ ಮತ್ತು ಮೋರಿಗಾಂವ್‌ನಲ್ಲಿ ಮೀನುಗಾರಿಕೆ ಉದ್ಯಮದಲ್ಲಿ ವಲಸೆ ಬಂದ ಮುಸ್ಲಿಮರು ಪ್ರಾಬಲ್ಯ ಹೊಂದಿದ್ದಾರೆ. ಈ ಜನರಿಂದ ಮೀನು ಖರೀದಿಸಬೇಡಿ ಎಂದು ಶರ್ಮಾ ಅಸ್ಸಾಂನ ಜನರಿಗೆ ಸಲಹೆ ನೀಡಿದ್ದಾರೆ.
ವ್ಯಾಪಾರ ಹೆಚ್ಚಿಸಲು ಶಾರ್ಟ್‌ಕಟ್‌ಗಳನ್ನು ಬಳಸುವ ಜನತೆಯಿಂದ ಮೀನು ಖರೀದಿಸಬೇಡಿ ಎಂದು ಸಿಎಂ ಹಿಮಂತ ಅಸ್ಸಾಂ ಜನರಿಗೆ ಸಲಹೆ ನೀಡಿದ್ದಾರೆ. ಮೀನು ಉತ್ಪಾದನೆ ಹೆಚ್ಚಿಸಲು ಸಾವಯವ ಮಾರ್ಗಗಳಿವೆ ಎಂದಿದ್ದಾರೆ.
ಸಿಎಂ ಹಿಮಂತ ಅವರು ಯಾವುದೇ ಧರ್ಮ, ಜಾತಿಯ ಹೆಸರು ಇಲ್ಲಿ ಉಲ್ಲೇಖಿಸಿಲ್ಲ ,ಆದರೆ ಅವರ ಅವರು ಹೇಳಿಕೆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನು ವ್ಯಾಪಾರ ಮಾಡುವ ಮಿಯಾನ್ ಮುಸಲ್ಮಾನರ ಜನರ ಕುರಿತು ಎಂದು ಹೇಳಿಕೆಯಿಂದ ಊಹಿಸಬಹುದು. ಬಾಂಗ್ಲಾದೇಶದಿಂದ ವಲಸೆ ಬಂದ ಮುಸ್ಲಿಮರಿಗೆ ಮಿಯಾನ್ ಪದವನ್ನು ಬಳಸಲಾಗುತ್ತದೆ.