ರೇಣುಕಾ ಹತ್ಯೆ: 17 ಮಂದಿ ಆರೋಪಿಗಳ ಪಾತ್ರ ಉಲ್ಲೇಖ
ಬೆಂಗಳೂರು,ಸೆ.೫-ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ನಗರದ ೨೪ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಹದಿನೇಳು ಮಂದಿ ಆರೋಪಿಗಳ ಪಾತ್ರವನ್ನು ವಿವರವಾಗಿ ಉಲ್ಲೇಖಿಸಲಾಗಿದೆ.
*ಎ೧ಪವಿತ್ರಾಗೌಡ
ರೇಣುಕಾಸ್ವಾಮಿ ಕೊಲೆಗೆ ಮೂಲ ಕಾರಣ ಪವಿತ್ರ ಗೌಡ ಆಗಿದ್ದು,ಆಕೆಯ ಪ್ರಚೋದನೆಯಿಂದಲೇ ಭಯಾನವಾಗಿ ಕೃತ್ಯ ನಡೆದಿದೆ.ಕೃತ್ಯದ ಸಮಯದಲ್ಲಿ ಅಲ್ಲೇ ಇರುವುದಕ್ಕೆ ಸಿಸಿಟಿವಿಯ ದೃಶ್ಯ, ಮೊಬೈಲ್ ಕೃತ್ಯದ ಸ್ಥಳದಲ್ಲಿ ಆಕ್ಟಿವ್ ಆಗಿರುವುದು ಸಾಕ್ಷಿಯಾಗಿದೆ.
*ಎ೨ ದರ್ಶನ್
ರೇಣುಕಾಸ್ವಾಮಿ ಅಪಹರಣ ಮಾಡಿಸಿದ್ದು , ಹಲ್ಲೆ ಮಾಡಿದ್ದು, ಕೊಲೆ ನಂತರ ಮುಚ್ಚಿಹಾಕಲು ಹಣ ನೀಡಿರುವುದು,ಕೊಲೆ ನಡೆದ ಸ್ಥಳದಲ್ಲಿ ಇರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಕೊಲೆ ಬಳಿಕ ಸ್ಥಳದಿಂದ ಪರಾರಿಯಾರಿಯಾಗುವ ದೃಶ್ಯ ಬಟ್ಟೆ ಮತ್ತು ಶೂನಲ್ಲಿ ರೇಣುಕಾ ಸ್ವಾಮಿ ರಕ್ತ ಇರುವುದು ಪತ್ತೆಯಾಗಿ ದರ್ಶನ್ ಹಲ್ಲೆ, ಕೊಲೆಯಲ್ಲಿ ಭಾಗಿರುವುದು ದೃಢವಾಗಿದೆ.
*ಎ೩ ಪವನ್
ಪವಿತ್ರ ಜೊತೆಗೆ ಇದ್ದು ,ಅಪಹರಣ ಮಾಡುವಾಗ ರಾಘವೇಂದ್ರ ಜೊತೆಗೆ ಸಂಪರ್ಕದಲ್ಲಿದ್ದು, ಶೆಡ್ ಗೆ ಹೋಗಿ ಹಲ್ಲೆ ಮಾಡಿರುವುದು. ಬೇರೊಂದು ಇನ್ಸ್ಟಾಗ್ರಾಮ್ ಅಕೌಂಟ್ ಮಾಡಿ ರೇಣುಕಾಸ್ವಾಮಿ ಜೊತೆಗೆ ಚಾಟ್ ಮಾಡಿ ಕಿಡ್ನಾಪ್ ಮಾಡುವಂತೆ ಸೂಚನೆ ನೀಡಿರುವುದರ ಸಾಕ್ಷಿ ಲಭ್ಯವಿದೆ.
*ರಾಘವೇಂದ್ರ
ದರ್ಶನ್ ಅಭಿಮಾನಿಗಳ ಸಂಘದ ಚಿತ್ರದುರ್ಗ ಘಟಕದ ಅದ್ಯಕ್ಷನಾದ ರಾಘವೇಂದ್ರ ರೇಣುಕಾಸ್ವಾಮಿ ಅಪಹರಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿರುವುದು ಕೊಲೆಯಾದ ಸ್ಥಳದಲ್ಲಿ ಹಾಜರಿರುವುದು ಕೊಲೆ ಬಳಿಕ ರೇಣುಕಾಸ್ವಾಮಿ ಮೈ ಮೇಲಿದ್ದ ಆಭರಣ ತೆಗೆದಿರುವುದರ ಸಾಕ್ಷಿ ಲಭ್ಯವಾಗಿದೆ.
*ನಂದೀಶ
ಶೆಡ್ ನಲ್ಲಿ ರೇಣುಕಾಸ್ವಾಮಿ ಸ್ವಾಮಿಗೆ ತೀವ್ರವಾಗಿ ಹಲ್ಲೆ ಮಾಡಿರುವುದು ಕೊಲೆ ಬಳಿಕ ವಾಹನದಲ್ಲಿ ಮೃತ ದೇಹ ಇಟ್ಟಿದ್ದು, ದೇಹ ಹೊತ್ತುಕೊಂಡು ಬಂದಿದ್ದ ದೃಶ್ಯ ಪತ್ತೆಯಾಗಿದೆ.
*ಜಗದೀಶ್ ಅಲಿಯಾಸ್ ಜಗ್ಗ
ರೇಣುಕಾಸ್ವಾಮಿ ಅಪಹರಣ ಮಾಡಿಕೊಂಡು ಚಿತ್ರದುರ್ಗದಿಂದ ಶೆಡ್ ಗೆ ಕರೆದುಕೊಂಡು ಬಂದಿದ್ದ ತಂಡದ ಸದಸ್ಯ, ಕೊಲೆ ಮಾಡಿದ ಬಳಿಕ ಪರಾರಿಯಾಗಿರುವುದು ಕಿಡ್ನಾಪ್ ನಂತರ ಕರೆತರುವಾಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.
*ಅನುಕುಮಾರ್ ಅಲಿಯಾಸ್ ಅನು
ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅಪಹರಣ ಮಾಡಿಕೊಂಡು ಶೆಡ್ ಕರೆತಂದು ಕೊಲೆ ಮಾಡಿದ ಬಳಿಕ ಪರಾರಿಯಾಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.