ಇಂದಿನಿಂದ ಪ್ರತಿ ಕೆಜಿಗೆ ಈರುಳ್ಳಿ ೩೫ ರೂ.ಗೆ ಖರೀದಿ
ನವದೆಹಲಿ,ಸೆ.೫-ಟೊಮೇಟೊ ಬೆಲೆ ಕುಸಿತದ ನಂತರ ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಮತ್ತೆ ಏರಲಾರಂಭಿಸಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಕೆಜಿಗೆ ೬೦ರಿಂದ ೭೦ ರೂ.ಗೆ ಮಾರಾಟವಾಗುತ್ತಿದೆ. ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಇಂದಿನಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಕಡಿಮೆ ದರದಲ್ಲಿ ಈರುಳ್ಳಿ ಮಾರಾಟ ಮಾಡಲಿದೆ.
ಈ ಈರುಳ್ಳಿ ಮಾರಾಟವನ್ನು ಮೊಬೈಲ್ ವ್ಯಾನ್‌ಗಳು ಮತ್ತು ಎನ್‌ಸಿಸಿಎಫ್‌ನ ಚಿಲ್ಲರೆ ಅಂಗಡಿಗಳ ಮೂಲಕ ಪ್ರತಿ ಕೆಜಿಗೆ ೩೫ ರೂಪಾಯಿಗಳ ರಿಯಾಯಿತಿ ದರದಲ್ಲಿ ಮಾಡಲಾಗುತ್ತದೆ. ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆ ನಿರಾಳರಾಗಿದ್ದಾರೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಕೃಷಿ ಭವನದಲ್ಲಿ ಈರುಳ್ಳಿ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸಲಿದ್ದಾರೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೃಷಿ ಭವನ, ಎನ್‌ಸಿಯುಐ ಕಾಂಪ್ಲೆಕ್ಸ್, ರಾಜೀವ್ ಚೌಕ್, ಪಟೇಲ್ ಚೌಕ್ ಮೆಟ್ರೋ ನಿಲ್ದಾಣ ಮತ್ತು ನೋಯ್ಡಾದ ಕೆಲವು ಭಾಗಗಳು ಸೇರಿದಂತೆ ೩೮ ಸ್ಥಳಗಳಲ್ಲಿ ಈರುಳ್ಳಿಯನ್ನು ವ್ಯಾನ್ ಮೂಲಕ ಮಾರಾಟ ಮಾಡಲಾಗುತ್ತದೆ. ದೆಹಲಿ, ಗಾಜಿಯಾಬಾದ್ ಮತ್ತು ನೋಯ್ಡಾದಲ್ಲಿ ಈರುಳ್ಳಿ ಕೆಜಿಗೆ ೬೦ ರೂ.ಗಿಂತ ಹೆಚ್ಚು ದರದಲ್ಲಿ ಮಾರಾಟವಾಗುತ್ತಿದೆ.ಈರುಳ್ಳಿ ಬೆಲೆ ಏರಿಕೆಗೆ ಕಾರಣ ಹಲವು ವಿಷಯಗಳಿಗೆ ಸಂಬಂಧಿಸಿದೆ. ಮಳೆಯಿಂದ ಈರುಳ್ಳಿ ಬೆಳೆ ಹಾನಿಯಾದರೆ, ಬೆಳೆ ಹಾನಿಯಾಗಿ ಉತ್ಪಾದನೆ ಕಡಿಮೆಯಾಗಿ ಬೆಲೆ ಏರಿಕೆಯಾಗುತ್ತದೆ.
ಎರಡನೆಯದಾಗಿ, ಈರುಳ್ಳಿ ಉತ್ಪಾದನೆಯು ಕಡಿಮೆ ಮಳೆ ಅಥವಾ ಅನಾವೃಷ್ಟಿಯಿಂದಾಗಿ ಅದರ ಪರಿಣಾಮವು ಬೆಲೆಯ ಮೇಲೆ ಕಂಡುಬರುತ್ತದೆ. ಇದಲ್ಲದೇ ಸಂಗ್ರಹ ಕಡಿಮೆಯಾದರೆ ಮಾರುಕಟ್ಟೆಗೆ ಹೊಸ ಬೆಳೆ ಬರುವ ಮುನ್ನವೇ ಬೆಲೆ ಏರಿಕೆ ಕಾಣುತ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾದ ಕಾರಣ ಬೇಡಿಕೆ ಮತ್ತು ಪೂರೈಕೆಯ ಅನುಗುಣವಾಗಿ ಪ್ರಕಾರ ಬೆಲೆ ಏರಿಕೆಯಾಗುತ್ತದೆ.