ಯುವ ದೇಹದಾರ್ಢ್ಯ ಪಟು ಮ್ಯಾಥ್ಯೂಸ್ ನಿಧನ
ಕ್ಯಾಟರಿನಾ,ಸೆ.೪-ಬ್ರೆಜಿಲ್ ದೇಶದ ಉದಯೋನ್ಮುಖ ದೇಹದಾರ್ಢ್ಯ ಪಟು ೧೯ ವರ್ಷದ ಮ್ಯಾಥ್ಯೂಸ್ ಪಾವ್ಲಾಕ್ ಮೃತಪಟ್ಟಿದ್ದಾರೆ. ಭಾನುವಾರ ಮಧ್ಯಾಹ್ನ ಅವರ ಶವ ಅವರ ಮನೆಯಲ್ಲಿ ಪತ್ತೆಯಾಗಿದೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಮ್ಯಾಥ್ಯೂಸ್ ದಕ್ಷಿಣ ಬ್ರೆಜಿಲ್‌ನ ಸಾಂಟಾ ಕ್ಯಾಟರಿನಾ ರಾಜ್ಯದ ನಿವಾಸಿಯಾಗಿದ್ದರು
ಮಾಧ್ಯಮ ವರದಿಗಳ ಪ್ರಕಾರ, ಅವರು ಇತ್ತೀಚೆಗೆ ಪ್ರಾದೇಶಿಕ ಸ್ಪರ್ಧೆಗಳಲ್ಲಿ ನಾಲ್ಕು ಮತ್ತು ಆರನೇ ಸ್ಥಾನವನ್ನು ಪಡೆದಿದ್ದಾರೆ.ಅವರು ಕಳೆದ ವರ್ಷ ಯೂ೨೩ ಸ್ಪರ್ಧೆಯನ್ನು ಗೆದ್ದಿದ್ದಾರೆ, ಅವರ ತವರು ನಗರದಲ್ಲಿ ಮಿಸ್ಟರ್ ಬ್ಲೂಮೆನೌ ಎಂಬ ಅಡ್ಡಹೆಸರನ್ನು ಗಳಿಸಿದ್ದಾರೆ ಎನ್ನಲಾಗಿದೆ.
ದೇಹದಾರ್ಢ್ಯದಲ್ಲಿ ತೊಡಗಲು ಕೇವಲ ೫ ವರ್ಷಗಳಲ್ಲಿ ತಮ್ಮ ದೇಹವನ್ನು ರೂಪಾಂತರಗೊಳಿಸಿದ್ದರು ಎನ್ನಲಾಗಿದೆ .ದೇಹವನ್ನು ಮಾರ್ಪಡಿಸಿಕೊಳ್ಳಲು
ಪಾವ್ಲಾಕ್ ಅನಾಬೋಲಿಕ್ ಸ್ಟೀರಾಯ್ಡ್‌ಗಳ ಬಳಸಿದ್ದಾರೆ ಎನ್ನುವ ಊಹಾಪೋಹಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ಟಿರಾಯ್ಡ್‌ಗಳ ಬಳಕೆಯಿಂದಾಗಿ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದ ವರದಿಗಳು ಸಾಮಾನ್ಯವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಮರ್ಶಕರು ಹೇಳುತ್ತಾರೆ. ಇದು ಪಾವ್ಲಾಕ್ ಹಠಾತ್ ಸಾವಿಗೆ ಕಾರಣವಾಗಿರಬಹುದು ಎನ್ನಲಾಗಿದೆ.
ಪಾವ್ಲಾಕ್ ಅವರ ಮಾಜಿ ತರಬೇತುದಾರ ಲೂಕಾಸ್ ಚೆಗಟ್ಟಿ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಇಂದು ಅತ್ಯಂತ ದುಃಖದ ದಿನ ಎಂದು ಅವರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ನೋವು ವ್ಯಕ್ತಪಡಿಸಿದ್ದಾರೆ.ಈ ಘಟನೆ ನಮ್ಮನ್ನು ಬೆಚ್ಚಿ ಬೀಳಿಸಿದೆ.
ನನ್ನ ದುಃಖವನ್ನು ವ್ಯಕ್ತಪಡಿಸಲು ಪದಗಳಿಲ್ಲ.ಕ್ರೀಡಾಪಟುವಾಗಿ ಉತ್ತಮ ಭವಿಷ್ಯವನ್ನು ಹೊಂದಿದ ಪಾವ್ಲಾಕ್ ಅಗಲುವಿಕೆ ಯಿಂದ ಒಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.