ಸಹಕಾರ ಬಲವರ್ಧನೆಗೆ ಭಾರತ- ಸಿಂಗಾಪುರ ಸಭೆ
ನವದೆಹಲಿ,ಸೆ.೪-ಭಾರತ- ಸಿಂಗಪುರ ನಡುವೆ ಪ್ರಾದೇಶಿಕ ಮತ್ತು ದ್ವಿಪಕ್ಷೀಯ ಸಭೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಸಿಂಗಾಪುರಕ್ಕೆ ಭೇಟಿ ನೀಡಲಿರುವ ಅವರ ಉಭಯ ದೇಶಗಳ ನಡುವೆ ಬಾಂಧವ್ಯ ಬಲವರ್ಧನೆಗೆ ಒತ್ತು ನೀಡಲು ನಿರ್ಧರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
“ಪ್ರಧಾನಿ ಭೇಟಿ ವೇಳೆ ಭಾರತ-ಸಿಂಗಾಪುರ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿ ಪರಿಶೀಲನೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ” ಎಂದು ತಿಳಿಸಿದೆ.
ಭೇಟಿಯ ಸಮಯದಲ್ಲಿ, ಪ್ರಧಾನ ಮಂತ್ರಿಗಳು ಸಿಂಗಾಪುರದ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ಅವರನ್ನು ಭೇಟಿ ಮಾಡುತ್ತಾರೆ ಮತ್ತು ಸಿಂಗಾಪುರದ ನಾಯಕತ್ವದೊಂದಿಗೆ ಸಂವಾದ ನಡೆಸಲಿದ್ದಾರೆ. ಅವರು ಸಿಂಗಾಪುರದ ಉದ್ಯಮಿಗಳನ್ನು ಭೇಟಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದೆ.
ಬ್ರೂನೈ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೂನೈ ಜೊತೆ ದ್ವಿಪಕ್ಷೀಯವಾಗಿ ಮತ್ತು ಪ್ರಾದೇಶಿಕ ಮತ್ತು ಬಹುಪಕ್ಷೀಯ ಆಯಾಮಗಳು ಕುರಿತು ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್ ಹೇಳಿದ್ದಾರೆ.
ಭಾರತ ಸಿಂಗಾಪುರದ ಮಂತ್ರಿಗಳ ದುಂಡುಮೇಜಿನ ಸಭೆಯ ಕುರಿತು ಚರ್ಚೆ ನಡೆಯಲಿದೆ ಇದಕ್ಕೂ , ಮೊದಲು ೨೦೨೨ ರಲ್ಲಿ ಮತ್ತು ನಂತರ ೨೦೨೪ ರಲ್ಲಿ ನಾಲ್ಕು ಭಾರತೀಯ ಮಂತ್ರಿಗಳು ಭಾಗವಹಿಸಿದ್ದರು. ಭಾರತ ಮತ್ತು ಸಿಂಗಾಪುರ ನಡುವಿನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಬ್ರೂನಿಯ ೨೮ನೇ ಸುಲ್ತಾನ್ ಒಮರ್ ಅಲಿ ಸೈಫುದ್ದೀನ್‌ರ ಹೆಸರನ್ನು ಇಡಲಾಗಿದೆ. ಈಗಿನ ಸುಲ್ತಾನನ ತಂದೆ, ಇದರ ನಿರ್ಮಾಣ ಸಹ ಪ್ರಾರಂಭಿಸಿದ ಮತ್ತು ೧೯೫೮ ರಲ್ಲಿ ಪೂರ್ಣಗೊಂಡಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಸೀದಿಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಈ ವೇಳೆ ಭಾರತೀಯ ಸಮುದಾಯದ ಸದಸ್ಯರ ಕೂಡ ಉಪಸ್ಥಿತರಿದ್ದರು ಎಂದಿದ್ದಾರೆ.