ಕಂಚು ಗೆದ್ದ ದೀಪ್ತಿಗೆ ಪ್ರಧಾನಿ ಅಭಿನಂದನೆ
ನವದೆಹಲಿ. ಸೆ.೪- ಪ್ಯಾರಾ ಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಮಹಿಳಾ ಅಥ್ಲೀಟ್ ದೀಪ್ತಿ ಜೀವನಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಮಹಿಳೆಯರ ೪೦೦ ಮೀ. ಟಿ೨೦ ಓಟದಲ್ಲಿ ದೀಪ್ತಿ ೫೫.೮೨ ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೂರನೆ ಸ್ಥಾನದೊಂದಿಗೆ ಕಂಚಿಗೆ ಮುತ್ತಿಟ್ಟರು.ಫೈನಲ್ ದೀಪ್ತಿ ಗಮನರ್ಹ ಪ್ರದರ್ಶನ ನೀಡಿ ಈ ಹಿಂದಿಗಿಂತ ೦.೧೬೪ ಸೆಕೆಂಡಗಳಲ್ಲಿ ವೇಗ ಹೆಚ್ಚಿಸಿಕೊಂಡು ಪದಕಕ್ಕೆ ಕೊರಳೊಡ್ಡಿದರು.
ಪ್ರಧಾನಿ ಮೋದಿ ಎಕ್ಸ್‌ನಲ್ಲಿ, ಮಹಿಳೆಯರ ೪೦೦ ಮೀ. ಟಿ೨೦ ವಿಭಾಗದಲ್ಲಿ ಅಮೋಘವಾಗಿ ಕಂಚು ಗೆದ್ದಿದ್ದಕ್ಕೆ ಅಭಿನಂದೆನಗಳು. ಇವರು ಅನೇಕ ಜನರಿಗೆ ಸ್ಫೂರ್ತಿಯಾಗಿದ್ದಾರೆ.ಅವರ ಕೌಶಲ್ಯ ಮತ್ತು ದೃಢತೆ ಶ್ಳಾಘನೀಯ ಎಂದು ಬಣ್ಣಿಸಿದ್ದಾರೆ.
ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ದೀಪ್ತಿ ೪೦೦ ಮೀ. ಟಿ೨೦ಯಲ್ಲಿ ೫೫.೦೭ ಸೆಕೆ. ಗುರಿ ಮುಟ್ಟಿ ವಿಶ್ವ ದಾಖಲೆ ನಿರ್ಮಿಸಿದ್ದರು.